Asianet Suvarna News Asianet Suvarna News

ಆನಂದ್ ಮಾಮನಿ ನಿಧನದಿಂದ ತೆರವಾದ ಸ್ಥಾನಕ್ಕೆ ಶುರುವಾಯ್ತು ಟಿಕೆಟ್ ಫೈಟ್..!

ಬೆಳಗಾವಿ ಚುನಾವಣಾ ಅಖಾಡದಲ್ಲಿ ಬಿಜೆಪಿಯಿಂದ ಟಿಕೆಟ್ ಫೈಟ್ ಶುರುವಾಗಿದ್ದು, ಸವದತ್ತಿ ಬಿಜೆಪಿ ಟಿಕೆಟ್‌'ಗಾಗಿ ರತ್ನಾ ಮಾಮನಿ ಸಂಬಂಧಿಕರ ಕಸರತ್ತು ನಡೆದಿದೆ‌.

ಸವದತ್ತಿ ಬಿಜೆಪಿ ಶಾಸಕ ಆನಂದ್ ಮಾಮನಿ ನಿಧನ ಹಿನ್ನೆಲೆ ತೆರವಾದ ಸ್ಥಾನಕ್ಕೆ ಟಿಕೆಟ್ ಫೈಟ್ ಶುರುವಾಗಿದೆ. ಸವದತ್ತಿ ಬಿಜೆಪಿ ಟಿಕೆಟ್‌'ಗಾಗಿ ರತ್ನಾ ಮಾಮನಿ ಸಂಬಂಧಿಕರ ಕಸರತ್ತು ನಡೆದಿದ್ದು, ಸಿಎಂ ಬೊಮ್ಮಾಯಿಯನ್ನು ಭೇಟಿಯಾದ ಆನಂದ ಮಾಮನಿ ಪತ್ನಿ ರತ್ನಾ, ಸಾಲಹಳ್ಳಿಯ ಸಿಎಂ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರತ್ನಾ ಮಾಮನಿ ತಯಾರಿ ನಡೆಸಿದ್ದು, ಸಿಎಂ ಬಳಿ ರತ್ನಾ ಪರ ಶಾಸಕ ಮಹದೇವಪ್ಪ ಯಾದವಾಡ ಬ್ಯಾಟಿಂಗ್‌ ಬೀಸಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ರತ್ನಾ ಮಾಮನಿ ಆಕ್ಟೀವ್‌ ಆಗಿದ್ದಾರೆ. ಬಿಜೆಪಿ ಹೈಕಮಾಂಡ್‌ ಕೈಗೊಳ್ಳುವ ನಿರ್ಧಾರದತ್ತ ಎಲ್ಲರ ಚಿತ್ತವಿದೆ.

Video Top Stories