ಬಳ್ಳಾರಿಯಲ್ಲಿ 'ಕೇಸರಿ' ಗರ್ಜನೆ: ಬಿಜೆಪಿ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಸಮಾವೇಶ?

ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಎಲ್ಲಾ ಪಕ್ಷಗಳಿಗೂ 2023ರ ಚುನಾವಣೆ ಮಾಡು ಇಲ್ಲವೇ ಮಡಿ ಪಂದ್ಯದ ಥರ ಆಗಿದೆ.

Share this Video
  • FB
  • Linkdin
  • Whatsapp

ಬಳ್ಳಾರಿಯಲ್ಲಿ ನಡೆದ ಬಿಜೆಪಿ ಎಸ್.ಟಿ ಸಮಾವೇಶ ರಾಜಕೀಯ ಚಟುವಟಿಕೆಗಳು ಗರಿಗೆದರುವ ಹಾಗೇ ಮಾಡಿದೆ. ಬಳ್ಳಾರಿಯಲ್ಲಿನ ಕೇಸರಿ ಕಲರವದಲ್ಲಿ ಶ್ರೀ ರಾಮುಲು ಕೂಡ ಇದ್ದರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ರಾಮುಲು ಮಾತಿಗೆ ನಿಂತಾಗ ಸೇರಿದ್ದ ಜನರು ಕೇಕೆ ಚಪ್ಪಾಳೆಯೊಂದಿಗೆ ಸ್ವಾಗತಿಸಿದರು. ಇನ್ನು ಕಾಂಗ್ರೆಸ್ ಕೂಡ ಎಸ್.ಸಿ ಎಸ್.ಟಿ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದು, ಆದ್ರೆ ಪೂರ್ವಭಾವಿ ಸಭೆಯಲ್ಲಿ ಪ್ರಮುಖ ನಾಯಕನ ಗೈರು ಎದ್ದು ಕಾಣಿಸ್ತಾ ಇತ್ತು. ಒಂದು ಕಡೆ ಬಿಜೆಪಿ , ಎಸ್ ಟಿ ಸಮಾವೇಶವನ್ನ ಮಾಡಿ ಹಿಂದುಳಿದ ಸಮುದಾಯಗಳ ವಿಶ್ವಾಸ ಗಳಿಕೆ ಕೆಲಸಕ್ಕೆ ಚಾಲನೆ ಕೊಟ್ಟಿದೆ. ಬಳ್ಳಾರಿಯಲ್ಲಿ ಬೃಹತ್ ಸಮಾವೇಶವನ್ನ ಮಾಡಿ ಮುಗಿಸಿದೆ. ಇನ್ನೊಂದು ಕಡೆ ಕಾಂಗ್ರೆಸ್ ಕೂಡ ಎಸ್ ಸಿ ಎಸ್ಟಿ ಸಮುದಾಯದ ಐಕ್ಯತಾ ಸಮಾವೇಶಕ್ಕೆ ಸಿದ್ಧತೆ ನಡೆಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೋದಿ ಸಲಹೆಯಂತೆ ದಲಿತ ಮೀಸಲು ಏರಿಕೆ: ಸಿಎಂ ಬೊಮ್ಮಾಯಿ

Related Video