Asianet Suvarna News Asianet Suvarna News

ಗೌಡರ ಕುಟುಂಬದಲ್ಲಿ ಬಿರುಗಾಳಿ..ಸಿಂ'ಹಾಸನ' ಕೈ ತಪ್ಪಿದ್ರೆ ರೆಬೆಲ್ ಆಗ್ತಾರಾ ಭವಾನಿ..?

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಆದರೆ ಜೆಡಿಎಸ್ ಹಾಸನ ಟಿಕೆಟ್ ಗೊಂದಲ ಮಾತ್ರ ಪರಿಹಾರವಾಗುತ್ತಿಲ್ಲ.

ರಾಜಕೀಯ ರಕ್ತ ಸಂಬಂಧಿಗಳ ಮಧ್ಯೆ ರಣಾಂಗಣ ಸೃಷ್ಠಿಸುತ್ತೆ. ರಕ್ತ ಹಂಚಿಕೊಂಡು ಹುಟ್ಟಿದವರು ರಾಜಕೀಯ ಕಾರಣಕ್ಕೆ ಶತ್ರುಗಳಾಗಿ ನಿಂತ ಉದಾಹರಣೆಗಳು ಸಾಕಷ್ಟಿವೆ. ಇದಕ್ಕೆ  ದೇವೇಗೌಡರ ಇಬ್ಬರ ಮಕ್ಕಳು ಅಪವಾದ. ಭಿನ್ನಾಭಿಪ್ರಾಯ ಬಗ್ಗೆ ರೇವಣ್ಣ ಸ್ಪಷ್ಟನೆ ಕೊಟ್ಟಿದ್ದಾಗಿನಿಂದ  ಇಲ್ಲಿಯವರೆಗೆ  ಮಾತಿಗೆ  ಚ್ಯುತಿ ಬಾರದಂತೆ ಅಣ್ಣ-ತಮ್ಮ ನಡೆದುಕೊಂಡಿದ್ದಾರೆ. ಆದರೆ ಈಗ ಹಾಸನ ಟಿಕೆಟ್ ದಂಗಲ್ ಅಣ್ಣ-ತಮ್ಮಂದಿರ ಮಧ್ಯೆ ಶೀತಲಸಮರಕ್ಕೆ ಕಾರಣವಾವಾದಂತೆ ಕಾಡುತ್ತಿದೆ. ಇನ್ನು ಭವಾನಿ  ರೇವಣ್ಣಗೆ  ಟಿಕೆಟ್‌ ಕೋಡಲು  ಸಾಧ್ಯಾನೇ ಇಲ್ಲ ಎಂದು  ಕುಮಾರಸ್ವಾಮಿ ಕಡ್ಡಿ ಮುರಿದಂತೆ ಹೇಳಿ ಬಿಟ್ಟಿದ್ದಾರೆ.  ಇದು ರೇವಣ್ಣ ಕುಟುಂಬ ಆಕ್ರೋಶಕ್ಕೆ ಕಾರಣವಾಗಿದೆ ಎಂದರೆ ತಪ್ಪಿಲ್ಲ .  ಭವಾನಿ  ರೇವಣ್ಣಗೆ  ಟಿಕೆಟ್‌ ಕೋಡುವಂತೆ ಕುಮಾರಸ್ವಾಮಿ  ಬಳಿ ರೇವಣ್ಣ ಕುಟುಂಬ ಮನವಿ ಮಾಡಿಕೊಂಡ್ರು, ಒತ್ತಡ ಹಾಕಿದ್ರೂ ಎಚ್‌ಡಿಕೆ ಸಮ್ಮತಿಸುತ್ತಿಲ್ಲ.  ಹೀಗಾಗಿ ರೇವಣ್ಣ  ಅಸಹನೆ ಬಂಡಾಯದ ರೂಪದ ಪಡೆದುಕೊಂಡಿದೆ ಅಂತ ಹೇಳಲಾಗ್ತಿದೆ. ಹಾಗಾದ್ರೆ ಹಾಸನ ಟಿಕೆಟ್ ಸಿಗದೇ ಇದ್ರೆ, ರೇವಣ್ಣ ಪತ್ನಿ ಭವಾನಿ ರೆಬೆಲ್ ಆಗ್ತಾರಾ..? ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸ್ತಾರಾ..? ಈ ವಿಡಿಯೋ ನೋಡಿ