karnataka assembly elections :'ನಮೋ' ಅಶ್ವಮೇಧಕ್ಕೆ ಕಡಿವಾಣ ಹಾಕಲು 'ಖರ್ಗೆ'ಪಡೆ ಸಿದ್ಧ: ದೆಹಲಿಯಿಂದಲೇ ಯುದ್ಧತಂತ್ರ

ಹಿಮಾಚಲ ಪ್ರದೇಶದಲ್ಲಿ ಗೆಲುವು, ಗುಜರಾತ್'ನಲ್ಲಿ ಸೋಲು. ಇದರ ನಡುವೆ ಕಾಂಗ್ರೆಸ್'ಗೆ ಕರ್ನಾಟಕ ಒಂದು ಸವಾಲು ಎದುರಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಶತಾಯ ಗತಾಯ ಗೆಲ್ಲೋದಕ್ಕೆ ಕಾಂಗ್ರೆಸ್ ಟೊಂಕಕಟ್ಟಿ ನಿಂತಿದೆ.
 

Share this Video
  • FB
  • Linkdin
  • Whatsapp

ಮಿಷನ್ ಕರ್ನಾಟಕ ಸಕ್ಸಸ್ ಆಗಿಸೋಕೆ ಕಾಂಗ್ರೆಸ್'ನಿಂದ ದೆಹಲಿಯಲ್ಲೇ ಆಪರೇಷನ್ ರೂಪುರೇಷೆ ಸಿದ್ಧವಾಗ್ತಾ ಇದೆ. ಪ್ರಧಾನಿ ಮೋದಿ ಆರ್ಭಟಕ್ಕೆ ಬ್ರೇಕ್ ಹಾಕೋಕೆ ಮಲ್ಲಿಕಾರ್ಜುನ ಖರ್ಗೆ ವ್ಯೂಹ ಹೆಣೆದಿದ್ದಾರೆ. ಕರ್ನಾಟಕದ ಹತ್ತಾರು ಮಂದಿ ನಾಯಕರು, ಕರ್ನಾಟಕ ಮೂಲದ ಕಾಂಗ್ರೆಸ್ ಅಧ್ಯಕ್ಷರು, ಇಷ್ಟು ಜನ ಸೇರಿ, ಕೈಪಾಳಯದ ಚರೀಷ್ಮಾವನ್ನು ಬದಲಿಸುವ ಯತ್ನದಲ್ಲಿದ್ದಾರೆ. ರಾಜ್ಯ ನಾಯಕರಿಗೆ ‘ಕೈ’ ಹೈಕಮಾಂಡ್'ನಿಂದ ಬುಲಾವ್ ಬಂದಿದ್ದೇ ತಡ, ದೆಹಲಿಯಲ್ಲಿ ನಡೀತಿರೋ ಹೈವೋಲ್ಟೇಜ್ ಸಭೆಗೆ ಹಾಜರಾದ್ರು. ಚುನಾವಣಾ ತಯಾರಿ ತಂತ್ರಗಾರಿಕೆಯ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

Related Video