ಬಿಜೆಪಿಯಿಂದ ವಿಜಯ್ ಸಂಕಲ್ಪ ಯಾತ್ರೆ: ಸಂಘಟನೆ ಬಲಗೊಳಿಸಲು ಕಸರತ್ತು

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕ ಕುರುಕ್ಷೇತ್ರಕ್ಕೆ ಕಮಲ ಪಾಳೆಯದಿಂದ ಭರ್ಜರಿ ಸಿದ್ಧತೆ ನಡೆದಿದೆ.

First Published Jan 16, 2023, 12:07 PM IST | Last Updated Jan 16, 2023, 12:07 PM IST

ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು ನಡೆಸುತ್ತಿದ್ದು, ಜನಸಂಕಲ್ಪ ಯಾತ್ರೆ ಆಯ್ತು ಈಗ ಮತ್ತೊಂದು ಯಾತ್ರೆ ಶುರು ಮಾಡಲು ನಿರ್ಧರಿಸಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಂಘಟನೆ ಬಲಗೊಳಿಸಲು ಕಸರತ್ತು ನಡೆಸಿದೆ. ಮೈಕ್ರೊ ಲೆವೆಲ್‌ ವರ್ಕ್‌ಗೆ ಇಳಿದ ರಾಜ್ಯ ಬಿಜೆಪಿ, ಗ್ರೌಂಡ್‌ ಲೆವೆಲ್‌ನಲ್ಲಿರುವ ಕಾರ್ಯಕರ್ತರಿಗೆ ಕೈ ತುಂಬ ಕೆಲಸ ಕೊಡಲಿದೆ. ವಿಜಯ್ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಮತ್ತೊಂದು ಅಭಿಯಾನ ಜನವರಿ 20ರಿಂದ ಆರಂಭಗೊಳ್ಳಲಿದೆ. ವಿಜಯ್ ಸಂಕಲ್ಪ ಯಾತ್ರೆ ಡಬಲ್‌ ಇಂಜಿನ್‌ ಸರ್ಕಾರದ ಅಭಿವದ್ಧಿ ಕಾರ್ಯಗಳನ್ನು ಸಾರುವ ಯಾತ್ರೆಯಾಗಿದ್ದು, ಮಿಸ್ಡ್‌ ಕಾಲ್‌ ಅಭಿಯಾನ, ಕರಪತ್ರ ಅಭಿಯಾನ ಸೇರಿ ಹತ್ತು ಹಲವು ಅಭಿಯಾನ ಇದಾಗಿದೆ. ರಾಜ್ಯದ ಪ್ರತಿ ಮನೆ-ಮನೆಗೂ ತೆರಳಿ ಕರ ಪತ್ರ ಹಂಚುವ ಅಭಿಯಾನ ಇದಾಗಿದ್ದು, ರಾಜ್ಯದ ಎಲ್ಲಾ ಬೂತ್‌ ಪ್ರಮುಖರಿಗೆ ಜವಾಬ್ದಾರಿ ನೀಡಲಾಗುತ್ತದೆ. ಬರೋಬ್ಬರಿ 58 ಸಾವಿರ ಬೂತ್‌ ಮೂಲಕ ಪ್ರತಿ ಮನೆಗೆ ಸಂಪರ್ಕ ಮಾಡಲಾಗುತ್ತದೆ.

ಸಂಪುಟ ವಿಸ್ತರಣೆ ಚರ್ಚೆಗೆ ಮರುಜೀವ: ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸದ ಗ ...