ಕರ್ನಾಟಕ ಕುರುಕ್ಷೇತ್ರದ ಹೊಸ್ತಿಲಲ್ಲಿ “ಕುಮಾರ ಯಜ್ಞ”: ಎಚ್‌ಡಿಕೆ ಮಹಾಯಾಗದ ಹಿಂದಿರುವ 2 ಮಹಾಸಂಕಲ್ಪಗಳು ಹೀಗಿದೆ..
ಶತ್ರುಪರಾಜಯಕ್ಕಾಗಿ, ರಾಜಕೀಯ ದಿಗ್ವಿಜಯಕ್ಕಾಗಿ ಮತ್ತು ಸಾಮ್ರಾಜ್ಯ ಸ್ಧಾಪನೆಗಾಗಿ ಶತಚಂಡಿಕಾಯಾಗ ನಡೆಸ್ತಾ ಇದ್ದಾರೆ. ಇದ್ರ ಜೊತೆಗೆ ಮಹಾರುದ್ರ ದಶಾಂಶ ಹೋಮ ಮತ್ತು ಮೃತ್ಯುಂಜಯ ಕೋಟಿ ಜಪವನ್ನೂ ಮಾಡ್ತಿದ್ದಾರೆ.
ಕರ್ನಾಟಕ ಕುರುಕ್ಷೇತ್ರ ಗೆದ್ದು ಪಟ್ಟ ದಕ್ಕಿಸಿಕೊಳ್ಳಲು ಪಣ ತೊಟ್ಟಿರೋ ದಳಪತಿ ಕುಮಾರಸ್ವಾಮಿ, ಇದಕ್ಕಾಗಿ ರಾಜಸೂಯ ಯಾಗ ಮಾಡ್ತಿದ್ದಾರೆ. ಶತ್ರುಪರಾಜಯಕ್ಕಾಗಿ, ರಾಜಕೀಯ ದಿಗ್ವಿಜಯಕ್ಕಾಗಿ ಮತ್ತು ಸಾಮ್ರಾಜ್ಯ ಸ್ಧಾಪನೆಗಾಗಿ ಶತಚಂಡಿಕಾಯಾಗ ನಡೆಸ್ತಾ ಇದ್ದಾರೆ. ಇದ್ರ ಜೊತೆಗೆ ಮಹಾರುದ್ರ ದಶಾಂಶ ಹೋಮ ಮತ್ತು ಮೃತ್ಯುಂಜಯ ಕೋಟಿ ಜಪವನ್ನೂ ಮಾಡ್ತಿದ್ದಾರೆ. ತಂದೆಯ ಆರೋಗ್ಯ ವೃದ್ಧಿಗಾಗಿ ಮೃತ್ಯುಂಜಯ ಕೋಟಿ ಜಪ ಮಾಡುತ್ತಿದ್ದರೆ, 3ನೇ ಬಾರಿ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಿಕೊಳ್ಳಲು ದಳಪತಿ ಯಜ್ಞ ನಡೆಸ್ತಿದ್ದಾರೆ ಎನ್ನಲಾಗುತ್ತಿದೆ. ಈ ಮಹಾಯಜ್ಞ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸುತ್ತಾ ಎಂಬ ಚರ್ಚೆಯುಂಟಾಗುತ್ತಿದೆ. ಈ ಬಗ್ಗೆ ಇಲ್ಲಿದೆ ವಿಶ್ಲೇಷಣೆ.