Ground Report:ದಕ್ಷಿಣ ಕನ್ನಡದ 'ಕೇಸರಿ' ಕೋಟೆಯಲ್ಲಿ ಈ ಬಾರಿ 'ಕೈ ಪಡೆ' ಪೈಪೋಟಿ
ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಪಕ್ಷಗಳಲ್ಲಿಯೂ ಟಿಕೆಟ್ ಫೈಟ್ ಶುರುವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕೋಟೆಯಲ್ಲಿ ಈ ಬಾರಿ ಕೈ ಪಡೆ ಪೈಪೋಟಿ ನಡೆಸಿದೆ. ಜಿಲ್ಲೆಯಲ್ಲಿ ಟಿಕೆಟ್'ಗಾಗಿ ಹೊಸ ಮುಖಗಳ ಪ್ರಯತ್ನ ನಡೆದಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಾಬಲ್ಯವಿದೆ. ಬಿಜೆಪಿಯಲ್ಲಿ ಹಾಲಿ ಶಾಸಕರನ್ನು ಕಣಕ್ಕೆ ಇಳಿಸುವುದೇ ಬಹುತೇಕ ಖಚಿತವಾಗಿದೆ. ಕೆಲಕಡೆಗಳಲ್ಲಿ ಜಾತಿವಾರು ಟಿಕೆಟ್ ಹಂಚಿಕೆ ನಡೆದರೂ, ಗೆಲುವಿಗೆ ಹಿಂದೂತ್ವವೇ ಮಾನದಂಡ. ಸುಳ್ಯದಲ್ಲಿ ಅಂಗಾರ ಸ್ಪರ್ಧೆ ಕುತೂಹಲ ಮೂಡಿಸಿದ್ದು, ಈಗಾಗಲೇ ಆರು ಬಾರಿ ಸುಳ್ಯದಿಂದ ಅಂಗಾರ ಗೆದ್ದಿದ್ದಾರೆ. ಇನ್ನು ಪುತ್ತೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿ ಬದಲು. ಪುತ್ತೂರಿನಲ್ಲಿ 1994ರಿಂದ ಬಿಜೆಪಿಯದ್ದೇ ಅಧಿಪತ್ಯ. ಬಿಜೆಪಿ ಶಾಸಕ ಸಂಜೀವ್ ಮಠಂದೂರು, ಕಾಂಗ್ರೆಸ್'ನಿಂದ ಶಕುಂತಲಾ ಶೆಟ್ಟಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಬೆಳ್ತಂಗಡಿಯಲ್ಲಿ ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್ ಸಂಬಂಧಿ ರೇಸ್'ನಲ್ಲಿದ್ದು, ಬಿಜೆಪಿಯಿಂದ ಹರಿಶ್ ಪೂಂಜಾಗೆ ಟಿಕೆಟ್ ಪಕ್ಕ. ಇನ್ನು ಬಂಟದವಾಳದಲ್ಲಿ ಜಿದ್ದಾಜಿದ್ದಿ ಪೈಪೋಟಿ ನೀರಿಕ್ಷೆ ಇದೆ.