Asianet Suvarna News Asianet Suvarna News

ಭವಾನಿಗೆ ಟಿಕೆಟ್ ಕೊಡಿಸಲು ಒಂದಾಯ್ತಾ ರೇವಣ್ಣ ಕುಟುಂಬ?

ದಿನದಿಂದ ದಿನಕ್ಕೆ ಜೆಡಿಎಸ್‌ ಪಾಲಿಗೆ ಹಾಸನ ಟಿಕೆಟ್‌ ಕಗ್ಗಂಟಾಗುತ್ತಿದೆ. ಎಚ್‌ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದರೆ, ಎಚ್‌ಡಿ ಕುಮಾರಸ್ವಾಮಿ ಮಾತ್ರ ಹಾಸನದಲ್ಲಿ ಭವಾನಿ ಚುನಾವಣೆಗೆ ನಿಲ್ಲುವ ಅನಿವಾರ್ಯತೆಯಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಭವಾನಿಗೆ ಟಿಕೆಟ್‌ ಕೊಡಿಸಲು ರೇವಣ್ಣ ಕುಟುಂಬ ಒಂದಾಗಿರುವಂತೆ ಕಾಣುತ್ತಿದೆ.


ಬೆಂಗಳೂರು (ಜೆ.28): ಒಂದೆಡೆ ಎಚ್‌ಡಿ ಕುಮಾರಸ್ವಾಮಿ ಪಂಚರತ್ನ ಯಾತ್ರೆಯ ಮೂಲಕ ಉತ್ತರ ಕರ್ನಾಟಕದ ಉರಿಬಿಸಿಲಲ್ಲಿ ನಿಂತು ಮುಂಬರುವ ಚುನಾವಣೆಯಲ್ಲಿ ಪ್ರಬಲ ಕಿಂಗ್‌ಮೇಕರ್‌ ಆಗುವ ಗುರಿಯಲ್ಲಿದ್ದರೆ, ಇನ್ನೊಂದೆಡೆ ಅವರ ಕುಟುಂಬದಲ್ಲೇ ಟಿಕೆಟ್‌ ಫೈಟ್‌ ಆರಂಭವಾಗಿದೆ. 

ಹಾಸನದಿಂದ ಸ್ವರೂಪ್‌ ಅವರಿಗೆ ಟಿಕೆಟ್‌ ನೀಡಬೇಕು ಎನ್ನುವುದು ಹೆಚ್‌ಡಿ ಕುಮಾರಸ್ವಾಮಿ ಆಸೆಯಾಗಿದ್ದರೆ, ಇನ್ನೊಂದೆಡೆ ಭವಾನಿ ರೇವಣ್ಣ ಹಾಸನದಿಂದ ತಾವೇ ಮುಂದಿನ ಅಭ್ಯರ್ಥಿ ಎಂದು ಹೇಳಿದ್ದಾರೆ. ಈ ನಡುವೆ ಭವಾನಿಗೆ ಟಿಕೆಟ್‌ ಕೊಡಿಸಲು ಇಡೀ ರೇವಣ್ಣ ಕುಟುಂಬವೇ ಒಂದಾಗಿರುವಂತೆ ಕಾಣುತ್ತಿದೆ. ಅಮ್ಮನ ಪರವಾಗಿ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಎಂಎಲ್‌ಸಿ ಸೂರಜ್‌ ರೇವಣ್ಣ ಬ್ಯಾಟಿಂಗ್‌ ಮಾಡಿದ್ದಾರೆ.

Assembly election: ಹಾಸನಕ್ಕೆ ಭವಾನಿ ರೇವಣ್ಣ ಅವರೇ ಸೂಕ್ತ- ಗೆದ್ದೇ ಗೆಲ್ತಾರೆ: ಸಂಸದ ಪ್ರಜ್ವಲ್‌ ರೇವಣ್ಣ

ಭವಾನಿಗೆ ಟಿಕೆಟ್‌ ಇಲ್ಲ ಎಂದಿದ್ದ ಕುಮಾರಸ್ವಾಮಿಗೆ ಟಾಂಗ್‌ ನೀಡಿರುವ ಸೂರಜ್‌, ಹಾಸನದಲ್ಲಿ ಟಿಕೆಟ್‌ ನಿರ್ಧಾರ ಮಾಡುವುದು ಎಚ್‌ಡಿ ದೇವೇಗೌಡ ಹಾಗೂ ರೇವಣ್ಣ ಎಂದು ಹೇಳಿದ್ದಾರೆ. ಜನಸಾಮಾನ್ಯರನ್ನ, ಕಾರ್ಯಕರ್ತರನ್ನ ನಿಲ್ಲಿಸ್ತೀನಿ ಅನ್ನೋದನ್ನು ಬಿಟ್ಟುಬಿಡಿ ಎಂದು ಸೂರಜ್‌ ಖಡಕ್‌ ಆಗಿ ಹೇಳಿದ್ದಾರೆ. ಇದರ ನಡುವೆ ಭವಾನಿ ರೇವಣ್ಣ ಟೆಂಪಲ್‌ ರನ್‌ ಮುಂದುವರಿಸಿದ್ದಾರೆ.  ರೇವಣ್ಣ ಜತೆ ಹರದೂರು ರಂಗನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರು. ಈ ವೇಳೆ ಇಡೀ ಕುಟುಂಬ ಕೂಡ ಭಾಗಿಯಾಗಿತ್ತು. 

Video Top Stories