Assembly election: ಚುನಾವಣೆಯಲ್ಲಿ ಕಾಂಗ್ರೆಸ್‌ 60-70, ಬಿಜೆಪಿ 50 ಸ್ಥಾನ ಮಾತ್ರ ಗೆಲ್ಲುತ್ತೆ!

ರಾಜ್ಯದಲ್ಲಿ ಜೆಡಿಎಸ್‌ ಪಕ್ಷದಿಂದ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯಿಂದ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಗಲಿಬಿಲಿ ಶುರುವಾಗಿದೆ. ರಣರಂಗದಲ್ಲಿ ನಾವು ಈಗಾಗಲೇ ಶಸ್ತ್ರಾಭ್ಯಾಸ ಮಾಡುತ್ತಿದ್ದೇವೆ.

Share this Video
  • FB
  • Linkdin
  • Whatsapp

ರಾಮನಗರ (ಡಿ.15): ರಾಜ್ಯದಲ್ಲಿ ಜೆಡಿಎಸ್‌ ಪಕ್ಷದಿಂದ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯಿಂದ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಗಲಿಬಿಲಿ ಶುರುವಾಗಿದೆ. ರಣರಂಗದಲ್ಲಿ ನಾವು ಈಗಾಗಲೇ ಶಸ್ತ್ರಾಭ್ಯಾಸ ಮಾಡುತ್ತಿದ್ದೇವೆ. ಕಾಂಗ್ರೆಸ್‌ 60-70 ಸ್ಥಾನಗಳನ್ನು ಹಾಗೂ ಬಿಜೆಪಿ 50 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ. ಇನ್ನು ಮತದಾರರು ಹಾಗೂ ಪಕ್ಷದ ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲಿ ಜನತೆಯ ಬಳಿ ಹೋಗುವಂತೆ ಕೆಲವು ಮಾರ್ಗದರ್ಶನಗಳನ್ನು ನಿಡಲಾಗಿದೆ. ಇನ್ನು ನಾಳೆ ರಾಜ್ಯದ 224 ಸ್ಥಾನಗಳಲ್ಲಿ ಜೆಡಿಎಸ್‌ನಿಂದ ಸ್ಪರ್ಧೆಗಿಳಿಯಲಿರುವ 90 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಇನ್ನು ನಮ್ಮ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಮಟ್ಟದಿಂದ ಸುರ್ಧೀವಾಗಿ ಕೆಲಸ ಮಾಡುವಂತಹ ಸಲಹೆಗಳನ್ನು ಕೂಡ ನೀಡಿದ್ದೇವೆ. 

Related Video