Asianet Suvarna News Asianet Suvarna News

ದಳಪತಿ ಕುಟುಂಬದಲ್ಲಿ ಟಿಕೆಟ್ ಕಾಳಗ: ಅತ್ತಿಗೆ-ಬಾಮೈದ ದಂಗಲ್‌ನಲ್ಲಿ ಗೆಲ್ಲೋದು ಯಾರು?

ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ದೇವೇಗೌಡರ ಕುಟುಂಬದೊಳಗೆ ಬಿರುಗಾಳಿ ಎದ್ದಿದೆ. ಭವಾನಿ ರೇವಣ್ಣ ಹಾಗೂ ಕುಮಾರಸ್ವಾಮಿ ಜಿದ್ದಾಜಿದ್ದಿನಲ್ಲಿ ಗೌಡರು ಯಾರ ಪರ ನಿಲ್ತಾರೆ ಎಂಬ ಡಿಟೇಲ್ಸ್ ಇಲ್ಲಿದೆ. 

ಇದು ದೇವೇಗೌಡರ ಕುಟುಂಬದೊಳಗೆ ಭುಗಿಲೆದ್ದಿರೋ ಹಾಸನ ಸಿಂಹಾಸನದ ಬೆಂಕಿಯ ರೋಚಕ ಕತೆ. ಒಂದು ಕಡೆ ದೊಡ್ಡಗೌಡರ ಹಿರಿಸೊಸೆ, ಮತ್ತೊಂದ್ಕಡೆ ಗೌಡರ ಕಿರಿಮಗ. ಅತ್ತಿಗೆ ಮತ್ತು ಬಾಮೈದನ ಮಧ್ಯೆ ಶುರುವಾಗಿರೋ ಟಿಕೆಟ್ ದಂಗಲ್. ಎಂಎಲ್ಎ ಆಗಲು ಹೊರಟ ಭವಾನಿ ರೇವಣ್ಣ ಹಾದಿಗೆ ದಳಪತಿ ಅಡ್ಡಗಾಲು ಹಾಕಿದ್ದಾರೆ. ಶಾಸಕಿಯಾಗೇ ಸೈ ಅಂತ ಶಪಥ ಮಾಡಿದ್ದಾರೆ ರೆಬಲ್ ಭವಾನಿ. ಅಷ್ಟಕ್ಕೂ ಗೌಡರ ಕುಟುಂಬದಲ್ಲಿ ಏನಾಗ್ತಿದೆ? ಹಾಸನ ಸಿಂಹಾಸನದ ವಿಚಾರದಲ್ಲಿ ತಮ್ಮ ಕುಟುಂಬದೊಳಗೆ ಎದ್ದಿರೋ ಬೆಂಕಿಯನ್ನು ಆರಿಸಲು ಗೌಡರ ತಂತ್ರ ಏನು..? ದೊಡ್ಡ ಗೌಡ್ರು ಹಿರಿಸೊಸೆಯ ಪರ ಬ್ಯಾಟ್ ಬೀಸ್ತಾರಾ..? ಕಿರಿಮಗನ ಮಾತಿಗೆ ಯೆಸ್ ಅಂತಾರಾ..? ರಾಜಕೀಯ ಭೀಷ್ಮಾಚಾರ್ಯನ ನಿರ್ಧಾರ ಏನು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Video Top Stories