ರಾಜ್ಯದಲ್ಲೂ ಡಬ್ಬಲ್ ಇಂಜಿನ್ ಸರ್ಕಾರ ಬರಲಿ: ಯೋಗಿ ಆಡಳಿತ ಕೊಂಡಾಡಿದ ಸುಮಲತಾ

ಮಂಡ್ಯದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು ಈ ಸಂದರ್ಭದಲ್ಲಿ ಸುಮಲತಾ ಮಾತನಾಡಿ  ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್  ಸಿಎಂ ಆಗಿ ಬಂದ ಮೇಲೆ ಈಗ ಸಂಪೂರ್ಣ ಬದಲಾಗಿದೆ ಎಂದು ಹೇಳಿದರು. 

Share this Video
  • FB
  • Linkdin
  • Whatsapp

ಮಂಡ್ಯದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು ಈ ಸಂದರ್ಭದಲ್ಲಿ ಸುಮಲತಾ ಮಾತನಾಡಿ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಸಿಎಂ ಆಗಿ ಬಂದ ಮೇಲೆ ಈಗ ಸಂಪೂರ್ಣ ಬದಲಾಗಿದೆ ಎಂದು ಹೇಳಿದರು. ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ರೌಡಿಗಳು ಓಡಿ ಹೋಗಿದ್ದಾರೆ. ಯುಪಿಯಲ್ಲಿ ಜನರು ಈಗ ನಿರ್ಭಯವಾಗಿ ಓಡಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಸುಧಾರಿಸಿದೆ. ಕರ್ನಾಟಕದಲ್ಲಿ ಆ ಸುಧಾರಣೆ ಆಗಬೇಕಿದೆ. ಇದಕ್ಕೆ ಡಬಲ್ ಇಂಜಿನ್ ಸರ್ಕಾರ ಬರಬೇಕು ಎಂದು ಯೋಗಿ ಆದಿತ್ಯನಾಥ್ ಆಡಳಿತವನ್ನ ಹೊಗಳಿದರು ಸುಮಲತಾ .ಮಂಡ್ಯದಲ್ಲಿ ಸಂಸದೆಯಾಗಿದ್ದಾಗ ಸಹಕಾರ ನೀಡಿದ್ದು ಮೋದಿ ಅವರ ಸರ್ಕಾರ. ಮಂಡ್ಯದಲ್ಲಿ ಬದಲಾವಣೆ ಬೇಕಿದೆ. ಕಳೆದ ಬಾರಿ ಚುನಾವಣೆಯಲ್ಲಿ 7 ಕ್ಕೆ 7 ಶಾಸಕರನ್ನ ಆಯ್ಕೆ ಮಾಡಿ, ಅವರೆಲ್ಲಾ ಯಾವ ಕೆಲಸ ಮಾಡಿದ್ದಾರೆ . ನಾನೇ ಸಿಎಂ ಆಗಬೇಕು ಅಂತ ಕನಸನ್ನು ಕಾಣುತ್ತಿದ್ದಾರೆ ಎಂದು ಪರೋಕ್ಷವಾಗಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಂಸದೆ ಸುಮಲತಾ ಅಂಬರೀಶ್​ ವಾಗ್ದಾಳಿ ನಡೆಸಿದರು.

Related Video