ನಾಳೆ ಕೋಲಾರಕ್ಕೆ ಸಿದ್ದರಾಮಯ್ಯ ಭೇಟಿ: ರಾಜಕೀಯ ಲೆಕ್ಕಾಚಾರ ಏನು?

ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಇದೀಗ ಭಾರೀ ಕುತೂಹಲ ಮೂಡಿಸಿದೆ.  ಕೋಲಾರ ಅಥವಾ ವರುಣಾ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ಪ್ರಶ್ನೆ ಮೂಡಿದೆ.
 

Share this Video
  • FB
  • Linkdin
  • Whatsapp

ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಗೊಂದಲದ ಗೂಡಾಗಿದ್ದು, ಎರಡನೇ ಬಾರಿ ನಾಳೆ ಸಿದ್ದರಾಮಯ್ಯ ಕೋಲಾರದಲ್ಲಿ ಸಂಚಾರ ಮಾಡಲಿದ್ದಾರೆ. ಜನರ ನಾಡಿಮಿಡಿತ ಅರಿಯಲು ಮತ್ತೆ ತೆರಳಲಿದ್ದಾರೆ. ಸಿದ್ದರಾಮಯ್ಯ ನಾಳೆ ಮಧ್ಯಾಹ್ನ ಕೋಲಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ವಿಸಿಟ್‌ ಮಾಡಲಿದ್ದಾರೆ. ಕೋಲಾರದಲ್ಲಿ ನಡೆಯುವ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದು, ಕಾರ್ಯಕರ್ತರಿಗೆ ಹಾಗೂ ಶಾಸಕರಿಗೆ ಸ್ಪಷ್ಟ ಸಂದೇಶ ನೀಡ್ತಾರಾ ಸಿದ್ದರಾಮಯ್ಯ ಎಂಬ ಪ್ರಶ್ನೆ ಮೂಡಿದೆ. ಕೋಲಾರದಲ್ಲಿ ಸ್ಪರ್ಧೆ ಮಾಡಿದ್ರೆ ಲಾಭ ನಷ್ಟದ ಬಗ್ಗೆಯೂ ಲೆಕ್ಕಾಚಾರವಿದ್ದು, ಮುನಿಯಪ್ಪ ಹಾಗೂ ರಮೇಶ್‌ ಕುಮಾರ್‌ ಬಣಗಳ ನಡುವೆ ಗುದ್ದಾಟ ಇದೆ. ಕೋಲಾರದ ಬಣ ಬಡಿದಾಟಕ್ಕೆ ಬ್ರೇಕ್‌ ಹಾಕ್ತಾರಾ ಸಿದ್ದರಾಮಯ್ಯ ಎಂದು ಕಾದು ನೋಡಬೇಕು.

Related Video