ವರುಣಾ ಚಕ್ರವ್ಯೂಹದಲ್ಲಿ ಸಿಲುಕಿದ್ರಾ ಸಿದ್ದರಾಮಯ್ಯ.. ಅಬ್ಬರಿಸಿ ಬೊಬ್ಬಿರಿದ ಸಿದ್ದು, ಕೇಸರಿ ವ್ಯೂಹಕ್ಕೆ ಕಂಗೆಟ್ಟರಾ..?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಳೆದೂ ತೂಗಿ ವರುಣಾ ಅಖಾಡವನ್ನು ಆಯ್ಕೆ ಮಾಡಿಕೊಂಡು ಕರ್ಮಭೂಮಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ವರುಣಾದಿಂದ ಸುಲಭವಾಗಿ ಗೆದ್ದು ಬರೋ ಲೆಕ್ಕಾಚಾರದಲ್ಲಿದ್ದ ಸಿದ್ದು, ಪ್ರಚಾರಕ್ಕೂ ಬರಲ್ಲ ಅಂತ ನಾಮಿನೇಷನ್'ಗೂ ಮೊದಲು ಹೇಳಿದ್ರೂ .ನಾನು ವೋಟ್ ಕೇಳಲು ಬರಲ್ಲ ಅಂದಿದ್ದ ಸಿದ್ದರಾಮಯ್ಯ ಈಗ ಎರಡು ದಿನ ಪ್ರಚಾರಕ್ಕೆ ಬರುತ್ತೇನೆ ಅಂತಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಳೆದೂ ತೂಗಿ ವರುಣಾ ಅಖಾಡವನ್ನು ಆಯ್ಕೆ ಮಾಡಿಕೊಂಡು ಕರ್ಮಭೂಮಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ವರುಣಾದಿಂದ ಸುಲಭವಾಗಿ ಗೆದ್ದು ಬರೋ ಲೆಕ್ಕಾಚಾರದಲ್ಲಿದ್ದ ಸಿದ್ದು, ಪ್ರಚಾರಕ್ಕೂ ಬರಲ್ಲ ಅಂತ ನಾಮಿನೇಷನ್'ಗೂ ಮೊದಲು ಹೇಳಿದ್ರೂ .ನಾನು ವೋಟ್ ಕೇಳಲು ಬರಲ್ಲ ಅಂದಿದ್ದ ಸಿದ್ದರಾಮಯ್ಯ ಈಗ ಎರಡು ದಿನ ಪ್ರಚಾರಕ್ಕೆ ಬರ್ತೀನಿ ಅಂತಿದ್ದಾರೆ. ವರುಣಾದಲ್ಲಿ ಒಂದು ಲಕ್ಷ ಮತಗಳ ಗೆಲ್ಲುವ ಲೆಕ್ಕಾಚಾರದಲ್ಲಿದ್ದ ಸಿದ್ದರಾಮಯ್ಯನವರಿಗೆ ಕರ್ಮಭೂಮಿಯ ಯುದ್ಧ ಕಗ್ಗಂಟಾಗುತ್ತಿರುವ ಸುಳಿವು ಸಿಕ್ಕಿರೋ ಹಾಗಿದೆ. ಪ್ರಚಾರವನ್ನೇ ನಡೆಸದೆ ಚುನಾವಣೆ ಗೆಲ್ಲೋ ಲೆಕ್ಕಾಚಾರದಲ್ಲಿದ್ದ ಸಿದ್ದರಾಮಯ್ಯ, ದಿನದಿಂದ ದಿನಕ್ಕೆ ಯುದ್ಧನೀತಿ ಬದಲಿಸುತ್ತಿರುವುದೇ ಇದಕ್ಕೆ ಸಾಕ್ಷಿ.ವರುಣಾದಲ್ಲಿ ಬಿಜೆಪಿ ಹಳೇ ಹುಲಿ ಸೋಮಣ್ಣನವರನ್ನು ಸಿದ್ದರಾಮಯ್ಯನವರ ವಿರುದ್ಧ ರಣರಂಗಕ್ಕೆ ಇಳಿಸಿ ಬಿಟ್ಟಿದೆ. ಲಿಂಗಾಯತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಸಿದ್ದು ವಿರುದ್ಧ ಸೋಮಣ್ಣ ಅಸ್ತ್ರ ಪ್ರಯೋಗಿಸಿದೆ. ಆದ್ರೆ ಸೋಮಣ್ಣ ಹರಕೆಯ ಕುರಿ ಅಂತ ಸಿದ್ದರಾಮಯ್ಯ ಹೇಳಿದ್ರೆ, ಹರಕೆಯ ಕುರಿ ಯಾರು ಅನ್ನೋದು ಮೇ 13ಕ್ಕೆ ಗೊತ್ತಾಗತ್ತೆ ಎಂದು ಚಾಲೆಂಜ್ ಮಾಡಿದ್ದಾರೆ ಕೇಸರಿ ಕಲಿಗಳು ವರುಣಾದಲ್ಲಿ ಸಿದ್ದರಾಮಯ್ಯನವರನ್ನು ಸುಲಭದಲ್ಲಿ ಗೆಲ್ಲಲು ಬಿಡುವ ಮಾತ್ ಇಲ್ಲ ಎಂದು ಶಪಥ ಮಾಡಿ ಕೇಸರಿ ಕಲಿಗಳು ಯುದ್ಧಭೂಮಿಗೆ ಧುಮುಕಿದ್ದಾರೆ. ಇದೆಲ್ಲದ ಸುಳಿವು ಸಿಕ್ಕಿರುವ ಸಿದ್ದರಾಮಯ್ಯ ಇದೇ ಕಾರಣದಿಂದ ಇದೇ ನನ್ನ ಕೊನೇ ಚುನಾವಣೆ ಅಂತ ಹುಟ್ಟೂರ ಜನರ ಮುಂದೆ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ.