ಕಾಂಗ್ರೆಸ್‌ಗೆ ತಿರುಗುಬಾಣವಾಯ್ತಾ ಪಂಚಮಸಾಲಿ ಅಸ್ತ್ರ.. ಮೀಸಲಾತಿ ಮಹಾಸಮರದಲ್ಲಿ ಸಿಎಂ ಮಾಸ್ಟರ್ ಸ್ಟ್ರೋಕ್..!
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಈ ಮಧ್ಯೆ ಪಂಚಮಸಾಲಿ ಅಸ್ತ್ರದ ಮೂಲಕ ಬಿಜೆಪಿ ಕಟ್ಟಿಹಾಕುವ ಕಾಂಗ್ರೆಸ್ ತಂತ್ರ ಅವರಿಗೆ ಮುಳುವಾದಂತಾಗಿದೆ.
ಬಿಜೆಪಿ ಸರ್ಕಾರ ಪಂಚಮಸಾಲಿ ಮೀಸಲಾತಿ ಅಸ್ತ್ರಕ್ಕೆ ಅಖಂಡ ಲಿಂಗಾಯತ ಪ್ರತ್ಯಾಸ್ತ್ರವಾಗಿ 2D ಪ್ರವರ್ಗದಡಿ ಮೀಸಲಾತಿ ನೀಡಿದ್ದು, ಸದ್ಯ ಸಿಎಂ ಬೊಮ್ಮಾಯಿ ಬೆನ್ನಿಗೆ ಇಬ್ಬರು ಪಂಚಮಸಾಲಿ ಸ್ವಾಮೀಜಿಗಳು ನಿಂತಿದ್ದಾರೆ. ಹೀಗಾಗಿ ಸಿಎಂ ಬೊಮ್ಮಾಯಿಗೆ ವಚನಾನಂದ ಶ್ರೀ ಮತ್ತು ಜಯಮೃತ್ಯುಂಜಯ ಶ್ರೀ ಬೆಂಬಲ ಸೂಚಿಸಿದ್ದಾರೆ. ಇನ್ನು ಸಿಎಂಗೆ ಸ್ವಾಮೀಜಿಗಳ ಬೆಂಬಲ ಸಿಗುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ತಳಮಳ ಶುರುವಾಗಿದ್ದು, ಪಂಚಮಸಾಲಿ ಅಸ್ತ್ರದ ಮೂಲಕ ಬಿಜೆಪಿ ಕಟ್ಟಿಹಾಕುವ ಕಾಂಗ್ರೆಸ್ ತಂತ್ರ ಅವರಿಗೆ ಮುಳುವಾದಂತಾಗಿದೆ. ಹಾಗೇ ಮೀಸಲಾತಿ ಗಿಫ್ಟ್ ಬಳಿಕ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿದ್ದು, ಶಿಗ್ಗಾಂವಿಯಲ್ಲಿ ಸ್ಪರ್ಧಿಸದಂತೆ ವಿನಯ್‌ಗೆ ಕಾಂಗ್ರೆಸ್ ಮುಖಂಡರು ಸಲಹೆ ನೀಡಿದ್ದರು. ಆದರೆ ವಿನಯ್ ಕುಲಕರ್ಣಿಗೆ ಮೂಲ ಕ್ಷೇತ್ರ ಬಿಟ್ಟು ತೆರಳದಂತೆ ಧಾರವಾಡ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ಮತ್ತೊಂದೆಡೆ ಪಂಚಮಸಾಲಿ ಸಮುದಾಯ ಬೆಂಬಲ ಸಿಗುತ್ತಾ ಅನ್ನುವ ಅನುಮಾನವು ಶುರುವಾಗಿದೆ.