ಮದ್ದೂರಿನಿಂದ ಡಿಕೆಶಿ ಸ್ಪರ್ಧೆ ವಿಚಾರ: ಕನಕಪುರ ಬಂಡೆಯ ಲೆಕ್ಕಾಚಾರ ಏನು?

ಮಂಡ್ಯ ಜಿಲ್ಲೆಯ ಮದ್ದೂರಿನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌  ಸ್ಪರ್ಧೆ ವಿಚಾರವಾಗಿ, ಡಬಲ್ ಲಾಭದ ಲೆಕ್ಕಾಚಾರದಲ್ಲಿ ಡಿಕೆಶಿ ಇದ್ದಾರಾ ಎಂಬ ಪ್ರಶ್ನೆ ಮೂಡಿದೆ.

Share this Video
  • FB
  • Linkdin
  • Whatsapp

ಮದ್ದೂರಿನಿಂದ ಡಿಕೆಶಿ ಸ್ಪರ್ಧೆ ವಿಚಾರ ಹೊಸ ಪ್ರಶ್ನೆ ಮೂಡಿದ್ದು, ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯುವ ಪ್ಲಾನ್‌ ಮಾಡಿದ್ರಾ ಡಿಕೆಶಿ ಎನ್ನುವಂತಾಗಿದೆ. ಮದ್ದೂರು ಕ್ಷೇತ್ರದ ಆಯ್ಕೆ ಹಿಂದೆ ಡಬಲ್‌ ಲಾಭದ ಲೆಕ್ಕಾಚಾರ ಇದ್ದು, ಒಂದು ಕನಕಪುರದಿಂದ ಕುಟುಂಬಸ್ಥರಿಗೆ ರಾಜಕೀಯ ನೆಲೆ ಮತ್ತೊಂದು ತನ್ನ ವಿರುದ್ಧ ತಿರುಗಿ ಬಿದ್ದ ಸುಮಲತಾಗೆ ಟಕ್ಕರ್‌ ಕೊಡಲು ಈ ತೀರ್ಮಾನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅಂಬರೀಶ್‌ ತವರು ಕ್ಷೇತ್ರ ಮದ್ದೂರಿನಿಂದ ಸುಮಲತಾ ಸ್ಪರ್ಧೆ ಸಾಧ್ಯತೆ ಇದ್ದು, ಮದ್ದೂರಿನಲ್ಲಿ ಸ್ಪರ್ಧಿಸಿ ಸುಮಲತಾ ಓಟಕ್ಕೆ ಬ್ರೇಕ್‌ ಹಾಕುವ ಪ್ಲಾನ್‌ ನಡೆಸಲಾಗಿದೆಯಾ ಎಂಬ ಚರ್ಚೆ ಶುರುವಾಗಿದೆ. ಮಂಡ್ಯದಿಂದ ಚೆಲುವರಾಯಸ್ವಾಮಿ ಕಣಕ್ಕಿಳಿಸಿ ಕಟ್ಟಿಹಾಕುವ ಪ್ಲಾನ್ ಇದಾಗಿದ್ದು, ಸುಮಲತಾ ವಿರುದ್ದ ಡಿಕೆಶಿ ಸೇಡು ತೀರಿಸಿಕೊಳ್ಳುವ ಪ್ಲಾನ್ ರೂಪಿಸಿದ್ರಾ ಎಂಬ ಪ್ರಶ್ನೆ ಮೂಡಿದೆ.

Related Video