Asianet Suvarna News Asianet Suvarna News

ಬಡತನ ಅರಿತವರನ್ನು ಆಯ್ಕೆ ಮಾಡಿ: ಕುಡತಿನಿಯಲ್ಲಿ ಕುಮಾರಸ್ವಾಮಿ ಕರೆ

ಬಳ್ಳಾರಿಯ ಕುಡತಿನಿ ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಲಾಗಿದ್ದು, ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿಯ ಕುಡತಿನಿ ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆ ನಡೆದಿದ್ದು, ಈ ವೇಳೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಕಿಡಿ ಕಾರಿದರು. ಅವರು ಕೋಟಿಗಟ್ಟಲೇ ಹಣ ಖರ್ಚು ಮಾಡಿ ಚೈನಾಗೆ ಮಣ್ಣು ಮಾರಿದ್ರು. ಇನ್ನೂ ನೀವು ಧೂಳಿನ ಮಧ್ಯೆ ಜೀವನ ನಡೆಸುತ್ತಿದ್ದೀರಿ ಎಂದು ಹೇಳಿದರು. ಕೆಲವರು ಮಣ್ಣು ಮಾರಿ ಶ್ರೀಮಂತರಾಗಿದ್ದಾರೆ, ರೈತರು ಕಾರ್ಮಿಕರು ಇನ್ನೂ ಹಾಗೇ ಇದ್ದಾರೆ. ಬಡತನ ಅರಿತವರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು. ನಾನು ರಾಜ್ಯ ಸರ್ಕಾರದ ಹಣವನ್ನು ಲೂಟಿ ಮಾಡಿಲ್ಲ. ಪ್ರಾಮಾಣಿಕವಾಗಿ ಹೋರಾಟವನ್ನು ಮಾಡಿದ್ದೇನೆ ಎಂದು ಹೇಳಿದರು. ಇದೇ ವೇಳೆ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದರು.

ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್: ನ್ಯಾಯಾಲಯಕ್ಕೆ ಸಾಕ್ಷ್ಯ ಸಲ್ಲಿಕೆ

Video Top Stories