ಹಾಸನ ವಿಚಾರದಲ್ಲಿ ತಲೆ ಹಾಕಬೇಡಿ: ಹೆಚ್‌ಡಿಕೆಗೆ ಸೂರಜ್‌ ರೇವಣ್ಣ ತಿರುಗೇಟು

ಹಾಸನದಲ್ಲಿ ಜೆಡಿಎಸ್‌ ಟಿಕೆಟ್‌ ಫೈಟ್‌ ಜೋರಾಗಿದ್ದು, ತಾಯಿ ಭವಾನಿ ಪರ ಎಂಎಲ್‌ಸಿ ಸೂರಜ್ ರೇವಣ್ಣ ರೇವಣ್ಣ ಬ್ಯಾಟ್ ಬೀಸಿದ್ದಾರೆ.

Share this Video
  • FB
  • Linkdin
  • Whatsapp

ಹಾಸನ ಜೆಡಿಎಸ್ ಟಿಕೆಟ್ ವಿಚಾರವಾಗಿ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ, ಸೂರಜ್ ರೇವಣ್ಣ ತೊಡೆ ತಟ್ಟಿದ್ದಾರೆ. ಹಾಸನದಲ್ಲಿ ಭವಾನಿ ರೇವಣ್ಣ ಅಭ್ಯರ್ಥಿಯಾದರೆ ಗೆಲವು ಖಚಿತ. ಜನಸಾಮನ್ಯರನ್ನು, ಕಾರ್ಯಕರ್ತರನ್ನು ನಿಲ್ಲಿಸ್ತೀನಿ ಅನ್ನೋದು ಬಿಟ್ಟುಬಿಡಿ ಎಂದು ನೇರವಾಗಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ಹಾಸನ ವಿಚಾರದಲ್ಲಿ ತಲೆ ಹಾಕಬೇಡಿ ಎಂದು ಹೆಚ್‌ಡಿಕೆಗೆ ಸೂರಜ್‌ ಟಾಂಗ್ ನೀಡಿದ್ದಾರೆ. ಹಾಸನ ಜಿಲ್ಲೆಯನ್ನು ರೇವಣ್ಣನವರಷ್ಟು ಅರಿತವತು ಭೂಮಿಯಲ್ಲೇ ಇಲ್ಲ, ರೇವಣ್ಣ ಬಿಟ್ಟು ಬೇರೆಯವರು ಹಾಸನದಲ್ಲಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಇಡೀ ಜಿಲ್ಲೆಯನ್ನು ರೇವಣ್ಣ ಸಮರ್ಪಕವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.

Related Video