
ಮಂಡ್ಯದ ಮೇಲೆ ಕಣ್ಣಿಟ್ಟ ಮೂರು ಪಕ್ಷಗಳು: ಜೆಡಿಎಸ್ ಭದ್ರಕೋಟೆ ಗೆಲ್ಲಲು ಕಾಂಗ್ರೆಸ್, ಬಿಜೆಪಿ ತಂತ್ರ ಏನು?
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು,ಹಳೇ ಮೈಸೂರಿನ ಮೇಲೆ ಮೂರು ಪಕ್ಷಗಳು ಕಣ್ಣಿಟ್ಟಿವೆ. ಸಕ್ಕರೆ ನಾಡಲ್ಲಿ ಅಖಾಡಕ್ಕಿಳಿಯಲು ಅತಿರಥರ ನಡುವೆ ಪೈಪೋಟಿ ಏರ್ಪಟ್ಟಿದೆ.
ಕರ್ನಾಟಕದಲ್ಲಿ ವಿಧಾನಸಭೆ ಅಖಾಡಕ್ಕೆ ವೇದಿಕೆ ಸಿದ್ಧವಾಗಿದ್ದು, ಎಲ್ಲರ ಕಣ್ಣು ಇದೀಗ ಮಂಡ್ಯ ಮೇಲೆ ಬಿದ್ದಿದೆ. ಮೂರು ಪಕ್ಷಗಳು ಮಂಡ್ಯ ಗೆಲ್ಲಲು ನಾನಾ ಕಸರತ್ತು ನಡೆಸಿವೆ. ಮಂಡ್ಯ ಬನ್ನಿ ಎಂದು ಡಿ.ಕೆ ಶಿವಕುಮಾರ್ ನಂತರ ಇದೀಗ ಹೆಚ್.ಡಿ. ಕುಮಾರಸ್ವಾಮಿಗೂ ಆಹ್ವಾನ ನೀಡಲಾಗಿದೆ. ಮಂಡ್ಯದಲ್ಲೂ ಕುಮಾರಸ್ವಾಮಿ ನಿಲ್ತಾರಾ ಎಂಬ ಚರ್ಚೆ ಶುರುವಾಗಿದೆ. ಇನ್ನು ಬಿಜೆಪಿಯಿಂದ ಸಚಿವ ಆರ್. ಅಶೋಕ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಮಂಡ್ಯ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಜೆಡಿಎಸ್-ಕಾಂಗ್ರೆಸ್ ಮಂಡ್ಯ ಗೆಲ್ಲಲು ರಣತಂತ್ರ ರೂಪಿಸಿದ್ರೆ, ಇತ್ತ ಬಿಜೆಪಿ ಮಂಡ್ಯ ಗೆಲ್ಲಲು ಈಗಾಗಲೇ ಫೀಲ್ಡಿಗೆ ಇಳಿದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ