'ದಳಪತಿ'ಗಳ ಪ್ರತಿಷ್ಠೆಯ ಕಣವಾದ ಕೆ.ಆರ್ ಪೇಟೆ: ಹೆಚ್‌ಡಿಕೆ-ರೇವಣ್ಣ ನಡುವೆ ಅಂತರ್ಯುದ್ಧ?
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ವಿರುದ್ಧ ಕುಮಾರಸ್ವಾಮಿ ಸಮರ ಸಾರಿದ್ರೆ, ಇತ್ತ ಕೆ.ಆರ್ ಪೇಟೆಯಲ್ಲಿ ಮಾತ್ರ ಕುಮಾರಸ್ವಾಮಿ Vs ರೇವಣ್ಣ ಫೈಟ್ ಶುರುವಾಗಿದೆ.
ಕೆ.ಆರ್ ಪೇಟೆ ಕ್ಷೇತ್ರವು ಮಾಜಿ ಪ್ರಧಾನಿ ದೇವೇಗೌಡರ ಪುತ್ರರ ಪ್ರತಿಷ್ಠೆಯ ಕಣವಾಗಿದ್ದು, ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಸಹೋದರರ ಬೆಂಬಲಿಗರ ನಡುವೆ ಅಸಮಾಧಾನ ಭುಗಿಲೆದ್ದಿದೆ. ಹೆಚ್.ಟಿ ಮಂಜು ಹೆಸರು ಘೋಷಿಸಿದಕ್ಕೆ ರೇವಣ್ಣ ಬೆಂಬಲಿಗರ ಬಂಡಾಯ ಎದ್ದಿದ್ದಾರೆ. ಹೆಚ್‌ಡಿಕೆ ಪಂಚರತ್ನ ಯಾತ್ರೆಗೂ ರೇವಣ್ಣ ಗೈರಾಗಿದ್ದಾರೆ. ಮೂರ್ನಾಲ್ಕು ಬಾರಿ ಸಂಧಾನ ಮಾತುಕತೆ ನಡೆಸಿದರೂ ಅಸಮಾಧಾನ ತಣ್ಣಗಾಗಿಲ್ಲ. ಎಲೆಕ್ಷನ್'ಗೆ ಸ್ಪರ್ಧಿಸುತ್ತೇನೆ ಎಂದು ದೇವರಾಜು ಪ್ರಚಾರ ಮಾಡುತ್ತಿದ್ದಾರೆ. ಹೆಚ್.ಡಿ ರೇವಣ್ಣ ಮೂಲಕ ಬಿ ಪಾರಂ ಪಡೆಯುವ ವಿಶ್ವಾಸದಲ್ಲಿ ದೇವರಾಜು ಇದ್ದು, ಇತ್ತ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಹೆಚ್.ಟಿ ಮಂಜು ತಿಳಿಸಿದ್ದಾರೆ.
ಪೊಲೀಸರಿಗೆ ಸಿಗದ ಸ್ಯಾಂಟ್ರೋ ರವಿ: 'ಪತ್ನಿ ಪೀಡಕ'ನನ್ನು ಬಿಟ್ಟು ಉಳಿದವರ ವಿಚಾರಣೆ ನಡೆಸಿದ ಖಾಕಿ