
ಕರ್ನಾಟಕಕ್ಕೆ ಕಾಂಗ್ರೆಸ್- ಜೆಡಿಎಸ್‌ನಿಂದ ಮುಕ್ತಿ ಕೊಡಿ: ಬಿಜೆಪಿಯನ್ನು ಗೆಲ್ಲಿಸಲು ಅಮಿತ್ ಶಾ ಮನವಿ
ಮಂಡ್ಯ ಜಿಲ್ಲೆ ಯಡಿಯೂರಪ್ಪರ ಜನ್ಮ ಸ್ಥಳವಾಗಿದೆ. ಅವರ ನಾಯಕತ್ವದಲ್ಲಿ ಮಂಡ್ಯ ಅಭಿವೃದ್ಧಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
2019ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶೇಕಡಾ 52 ರಷ್ಟು ಮತವನ್ನು ನೀಡುವ ಮೂಲಕ 25 ಕ್ಷೇತ್ರದಲ್ಲಿ ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸಿದ್ದೀರಿ ಎಂದು ಅಮಿತ್ ಶಾ ಹೇಳಿದರು. ಇಷ್ಟು ವರ್ಷ ಕಾಂಗ್ರೆಸ್ ಜೆಡಿಎಸ್ ಗೆದ್ದಿದ್ದು ಆಯಿತು. ಈ ವರ್ಷ ಬಿಜೆಪಿಯು ಮಂಡ್ಯ ಮೈಸೂರಿನಲ್ಲಿ ಸಂಪೂರ್ಣ ಬಹುಮತವನ್ನು ಪಡೆಯುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕುಟುಂಬ ರಾಜಕಾಣವನ್ನು ಮಾಡುತ್ತಿದೆ. ಇವು ಭ್ರಷ್ಟಚಾರದಿಂದ ತುಂಬಿರುವಂತ ಪಾರ್ಟಿಗಳು. ಭ್ರಷ್ಟಾಚಾರದಿಂದ ಕರ್ನಾಟಕ ವಿಕಾಸ ಆಗುವುದನ್ನು ತಡೆಯುತ್ತಿವೆ. ಈ ಎರಡು ಪಕ್ಷಗಳಿಂದ ಕರ್ನಾಟಕಕ್ಕೆ ಮುಕ್ತಿ ಕೊಟ್ಟು ಬಿಜೆಪಿಯನ್ನು ಗೆಲ್ಲಿಸಿ ಎಂದು ಕೇಳಿಕೊಂಡರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ