Mandya: ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿಎಂ ಬೊಮ್ಮಾಯಿ

ದೇಶದ ಹಲವಾರು ಸಮಸ್ಯೆಗಳನ್ನು ಅತ್ಯಂತ ದಕ್ಷತೆಯಿಂದ ಬಗೆಹರಿಸಿ ಭಾರತಕ್ಕೆ ಅಖಂಡತೆ ಹಾಗೂ ಏಕತೆಯನ್ನು ತಂದ ಅಮಿತ್‌ ಶಾ ನೆಚ್ಚಿನ ಗೃಹ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಮಂಡ್ಯದ ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಭಾರತೀಯ ಜನತಾ ಪಕ್ಷದ ಗಾಳಿ ಎಲ್ಲಾ ಕಡೆ ಬೀಸುತ್ತಿದೆ ಎಂದರು. ಕಳೆದ 30 ವರ್ಷಗಳಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಮಂಡ್ಯ ಭಾಗಕ್ಕೆ ಸವಲತ್ತುಗಳನ್ನು ಕೊಡಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಿಫಲವಾಗಿವೆ. ಹೀಗಾಗಿ ರೈತಾಪಿ ವರ್ಗ, ಯುವಕರು ಹಾಗೂ ಮಹಿಳೆಯರು ಇವತ್ತು ಬಿಜೆಪಿ ಕಡೆ ನೋಡುತ್ತಿದ್ದಾರೆ ಎಂದರು. 

Amit Shah: ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸದಾ ಸಿದ ...

Related Video