ರಾಜ್ಯದಲ್ಲಿ ಎರಡು ದಿನ ಅಮಿತ್ ಶಾ ಪ್ರವಾಸ: ಬಿಜೆಪಿ ನಾಯಕರ ಜೊತೆ ಹೈವೋಲ್ಟೇಜ್ ಮೀಟಿಂಗ್?

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಪಕ್ಷವು ಫುಲ್ ಆಕ್ಟೀವ್‌ ಆಗಿದ್ದು, ಕರ್ನಾಟಕದತ್ತ ಬಿಜೆಪಿ ಕೇಂದ್ರ ನಾಯಕರ ದಂಡಯಾತ್ರೆ ಶುರುವಾಗುತ್ತಿದೆ.  
 

Share this Video
  • FB
  • Linkdin
  • Whatsapp

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಕಾವು ಜೋರಾಗಿದ್ದು, ಎರಡು ದಿನ ರಾಜ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲನೇ ದಿನ ಮಂಡ್ಯ ಹಾಗೂ ಎರಡನೇ ದಿನ ಬೆಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್‌ 29 ಹಾಗೂ 30ರಂದು ರಾಜ್ಯದಲ್ಲಿ ಅಮಿತ್‌ ಶಾ ಸಂಚಾರ ಮಾಡಲಿದ್ದು, ಈ ವೇಳೆ ರಾಜ್ಯ ಬಿಜೆಪಿ ನಾಯಕರ ಜೊತೆ ಸಭೆ ನಡೆಸುವ ಸಾಧ್ಯತೆ ಇದೆ. ಬೆಂಗಳೂರು ಉತ್ತರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮೂರು ಕ್ಷೇತ್ರದ ಆರೇಳು ಸಾವಿರ ಕಾರ್ಯಕರ್ತರ ಜೊತೆ ಸಂವಾದ ನಡೆಸಲಿದ್ದಾರೆ.

Related Video