'ಹೈಕಮಾಂಡ್ ನನ್ನನ್ನ ಸಿಎಂ ಮಾಡಿದ್ರೆ ಬೇಡ ಅನ್ನೋಕೆ ಆಗುತ್ತಾ..?'

 ಕಾಂಗ್ರೆಸ್‌  130 ಸ್ಥಾನ ಪಡೆಯುತ್ತೆ. ಸರ್ಕಾರ ರಚನೆ ಮಾಡಲು ನಾವು ಮಾನಸಿಕವಾಗಿ ಸಿದ್ಧರಾಗಿದ್ದೇವೆ ಎಂದು ಜಿ. ಪರಮೇಶ್ವರ್ ಹೇಳಿದರು.

First Published May 11, 2023, 1:41 PM IST | Last Updated May 11, 2023, 1:41 PM IST

 ಕಾಂಗ್ರೆಸ್‌  130 ಸ್ಥಾನ ಪಡೆಯುತ್ತೆ. ಸರ್ಕಾರ ರಚನೆ ಮಾಡಲು ನಾವು ಮಾನಸಿಕವಾಗಿ ಸಿದ್ಧರಾಗಿದ್ದೇವೆ ಎಂದು ಜಿ. ಪರಮೇಶ್ವರ್ ಹೇಳಿದರು, ಮಾಧ್ಯಮದ ಜತೆ ಮಾತನಾಡಿದ ಅವರು   ಹಳೆದ ಬಾರಿ ನಾನು 120 ಸೀಟ್ ಬರುವ ಮುನ್ಸೂಚನೆ ಕೊಟ್ಟಿದ್ದೆ. ಆದರೆ 122 ಸ್ಥಾನ ಬಂದಿತ್ತು. ಈಗ ನಾನು 130 ಸ್ಥಾನ ಎಂದು ಹೇಳಿದ್ದೇನೆ. ನನ್ನ ಲೆಕ್ಕಾಚಾರ ಸರಿ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಸಿಎಂ ಆಯ್ಕೆಯು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು. ಸಿಎಲ್‍ಪಿ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರು ಒಳ್ಳೆ ಆಡಳಿತ ಕೊಡುತ್ತಾರೆ ಅವರನ್ನು ಹೈಕಮಾಂಡ್ ಸಿಎಂ ಮಾಡಬಹುದು. ಹೈಕಮಾಂಡ್ ನನಗೆ ಸಿಎಂ ಕೊಡುತ್ತೇನೆ ಅಂದರೆ ಬೇಡ ಅನ್ನುತ್ತೇನಾ.. ಎಂದು ಹೇಳಿದರು .
 

Video Top Stories