ಆಣೆ ಮಾಡಿಸಿ ಮತದಾರರಿಗೆ ಮಿಕ್ಸಿ ಗಿಫ್ಟ್‌: ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಜಾಧವ್‌ ಆರೋಪ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, 2023 ಚುನಾವಣೆ ಗೆಲ್ಲಲು ಟಿಕೆಟ್‌ ಆಕಾಂಕ್ಷಿಗಳಿಂದ ನಾನಾ ಕಸರತ್ತು ನಡೆದಿದೆ.

Share this Video
  • FB
  • Linkdin
  • Whatsapp

ಬೆಳಗಾವಿಯಲ್ಲಿ ಗಿಫ್ಟ್‌ ಪಾಲಿಟಿಕ್ಸ್‌ ನಂತರ ಇದೀಗ ಆಣೆ ಪಾಲಿಟಿಕ್ಸ್‌ ಶುರುವಾಗಿದೆ. ತೆಂಗಿನಕಾಯಿ ಮೇಲೆ ಆಣೆ ಮಾಡಿಸಿ ಮತದಾರರಿಗೆ ಮಿಕ್ಸಿ ಗಿಫ್ಟ್‌ ಕೊಡಲಾಗುತ್ತಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಧನಂಜಯ್‌ ಜಾಧವ್‌ ಆರೋಪ ಮಾಡಿದ್ದಾರೆ. ಮತದಾರರನ್ನು ಸೆಳೆಯಲು ಗಿಫ್ಟ್‌ ನೀಡ್ತಿದ್ದಾರೆ ಎಂದು ಬಿಜೆಪಿ ಟಿಕೆಟ್‌ ಆಕಾಂಕ್ಷಿ ಧನಂಜಯ್‌ ಆರೋಪ ಮಾಡಿದ್ದಾರೆ. ಆಣೆ ಪ್ರಮಾಣ ಮಾಡಿಸುವವರಿಗೆ ಧನಂಜಯ ಜಾಧವ್‌ ತರಾಟೆಗೆ ತೆಗೆದುಕೊಂಡಿದ್ದು, ವಿಡಿಯೋ ಬಿಡುಗಡೆ ಮಾಡಿದ್ದಾರೆ.

Related Video