Karnataka Assembly Election ಮತದಾನಕ್ಕಾಗಿ ಊರಿಗೆ ಹೊರಟ ಜನ, ಬಸ್ ಸಿಗದೆ ಪರದಾಟ!
ಮತದಾನ ಬೆನ್ನಲ್ಲೇ ನಾಯಕರಿಂದ ಟೆಂಪಲ್ ರನ್, ಖಾಸಗಿ ಬಸ್‌ಗಳಿಂದ ದುಪ್ಪಟ್ಟು ಹಣ ವಸೂಲಿ, ಚುನಾವಣೆ ಭರಾಟೆಯಲ್ಲಿ ಬೆಟ್ಟಿಂಗ್ ಜೋರು, ಯಾರಿಗೆ ಗೆಲುವು? ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ನಾಳೆ(ಮೇ.10) ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. 58,282 ಮತಗಟ್ಟೆ ಸ್ಥಾಪಿಸಲಾಗಿದ್ದು, ಸುಗಮ ಮತಕ್ಕಾಗಿ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಪ್ರಜಾಪ್ರಭುತ್ವ ಹಬ್ಬಕ್ಕೆ ಇಡೀ ಕರುನಾಡು ಸಜ್ಜಾಗಿದೆ.ನಾಳೆ ಮತದಾನದ ಕಾರಣ ಇಂದು ಊರಿಗೆ ತೆರಳು ಜನರು ಪರದಾಡಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿ ತುಳುಕಿತ್ತು. ಮೂರುವರೆ ಸಾವಿರ ಬಸ್ ಬಿಟ್ಟಿದ್ದರೂ ಜನರು ಪರದಾಡಿದ್ದರು. ಇದೇ ಸಂದರ್ಭವನ್ನು ಖಾಸಗಿ ಬಸ್‌ಗಳು ಬಳಸಿಕೊಂಡು ದುಪ್ಪಟ್ಟು ಹಣ ಕಿತ್ತುಕೊಳ್ಳುತ್ತಿದೆ. ಹಲವು ಪ್ರಯಾಣಿಕರು ಬಸ್ ಸಿಗದೆ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಬಂದೊದಗಿದೆ.