
ವಿಧಾನಸಭೆ ಜೊತೆ ಕೇಂದ್ರದಲ್ಲಿ ಹ್ಯಾಟ್ರಿಕ್ ಗೆಲುವಿಗೆ ಪ್ಲಾನ್: ಹೈಕಮಾಂಡ್ ಕೊಟ್ಟ ಟಾಸ್ಕ್ ಏನು?
ಎರಡು ದಿನ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ. ವಿಧಾನಸಭೆ ಜೊತೆ ಕೇಂದ್ರದಲ್ಲೂ ಹ್ಯಾಟ್ರಿಕ್ ಗೆಲುವಿಗೆ ಪ್ಲಾನ್'ಗಾಗಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಗೆಲುವಿಗೆ ಬ್ಲೂ ಪ್ರಿಂಟ್ ರಚಿಸಲಾಗಿದೆ. ರಾಜ್ಯ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಚರ್ಚೆ ನಡೆಸಿದ್ದಾರೆ. ಪ್ರಧಾನಿ ಹಾಗೂ ಹೈಕಮಾಂಡ್ ಕೈಗೆ ರಾಜ್ಯ ರಾಜಕೀಯದ ರಿಪೋರ್ಟ್ ಸೇರಿದೆ. ಅಧಿವೇಶನದ ಬಳಿಕ ರಾಜ್ಯದಲ್ಲಿ ನಾಯಕರ ರಥಯಾತ್ರೆ ಆರಂಭವಾಗಲಿದ್ದು, ಜನವರಿಯಿಂದಲೇ ವಿಜಯ ಸಂಕಲ್ಪ ಯಾತ್ರೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಬೂತ್ ಮಟ್ಟದಿಂದ ಪಕ್ಷ ಬಲವರ್ಧನೆಗೆ ಹೈಕಮಾಂಡ್ ಸೂಚನೆ ನೀಡಿದ್ದು, ಹಳ್ಳಿ to ದಿಲ್ಲಿ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ರವಾನಿಸಿದ್ದಾರೆ. ರ್ಯಾಲಿ ವೇಳೆ ರಾಜಕೀಯದ ಜೊತೆ ಸಾಮಾಜಿಕ ಕಾರ್ಯಕ್ಕೂ ಒತ್ತು ನೀಡಲು ಸೂಚನೆ ನೀಡಲಾಗಿದೆ. 2023ರ ಸರಣಿ ಮಹಾ ಸಮರಕ್ಕೆ ಬಿಜೆಪಿ ಪಾಂಚ ಜನ್ಯ ಮೊಳಗಿಸಿದ್ದು, ದಿಲ್ಲಿ ಕಾರ್ಯಕಾರಣಿಯಲ್ಲಿ ಕರ್ನಾಟಕ ಸಮರ ಸೂತ್ರ ಸಾರಿದೆ.