Asianet Suvarna News Asianet Suvarna News

ಒಕ್ಕಲಿಗ-ಲಿಂಗಾಯತ ಮತ ಬೇಟೆಗೆ ಬಿಜೆಪಿ ಸರ್ಕಸ್‌: ಶುರುವಾಯ್ತು ಮತ್ತೊಂದು ಸುತ್ತಿನ ಪ್ರತಿಮೆ ಪಾಲಿಟಿಕ್ಸ್

ರಾಜ್ಯದ ಪ್ರಮುಖ ಸಮುದಾಯಗಳನ್ನು ಸೆಳೆಯಲು ಕಮಲಪಡೆ ಸ್ಕೆಚ್‌ ಹಾಕಿದ್ದು, ಒಕ್ಕಲಿಗ ಹಾಗೂ ಲಿಂಗಾಯತ ಮತ ಬೇಟೆಗೆ ಬಿಜೆಪಿಯಿಂದ  ಸರ್ಕಸ್‌ ಮುಂದುವರೆದಿದೆ.

ಮಠಗಳ ರೌಂಡ್ಸ್‌ ಬಳಿಕ ಬಿಜೆಪಿ ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಮತ್ತೊಮ್ಮೆ ಪ್ರತಿಮೆ ಪಾಲಿಟಿಕ್ಸ್ ಮೂಲಕ ಮತಬೇಟೆಗೆ ಮುಂದಾಗಿದೆ. ಶಕ್ತಿಕೇಂದ್ರ ವಿಧಾನಸೌಧದ ಮುಂದೆ ಮತ್ತೆರಡು ಪ್ರತಿಮೆಗಳ ಸ್ಥಾಪನೆಗೆ ಸಜ್ಜಾಗಿದ್ದು, ನಾಡಪ್ರಭು ಕೆಂಪೇಗೌಡ ಹಾಗೂ ವಿಶ್ವಗುರು ಬಸವೇಶ್ವರರ ಪ್ರತಿಮೆ ನಿರ್ಮಿಸಲು ನಿರ್ಧರಿಸಲಾಗಿದೆ. ಮಹಾತ್ಮ ಗಾಂಧಿ ಬಳಿಕ ಬಸವೇಶ್ವರ, ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗಲಿದ್ದು, ಕೆಂಪೇಗೌಡರ ಪ್ರತಿಮೆ ಮೂಲಕ ಒಕ್ಕಲಿಗ ಸಮುದಾಯಕ್ಕೆ ಗಾಳ ಹಾಗೂ ಬಸವೇಶ್ವರ ಪ್ರತಿಮೆ ಮೂಲಕ ಲಿಂಗಾಯತ ಸಮುದಾಯದ ಮತ ಸೆಳೆಯುವ ಸ್ಕೆಚ್‌ ಹಾಕಲಾಗಿದೆ. ಬಹಳ ವರ್ಷಗಳ ಬೇಡಿಕೆಗೆ ಸ್ಪಂದಿಸುವ ಯತ್ನ ಮಾಡಿರುವ ಬಿಜೆಪಿ ಸರ್ಕಾರ,  24 ಅಡಿ ಎತ್ತರದ ಕೆಂಪೇಗೌಡ ಹಾಗೂ ಬಸವಣ್ಣನವರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದೆ. ಎರಡು ಪ್ರತಿಮೆಗಳಿಗೆ  ಬರೋಬ್ಬರಿ 8 ಕೋಟಿ ರೂ. ವೆಚ್ಚಕ್ಕೆ ಸರ್ಕಾರ ಸಮ್ಮತಿ ನೀಡಿದ್ದು, ಶಕ್ತಿ ಕೇಂದ್ರ ವಿಧಾನ ಸೌಧದ ಬಳಿ ಮುಂದೆ ಮತ್ತೆರಡು ಪ್ರತಿಮೆಗಳ ಸ್ಥಾಪನೆಗೆ ಸಜ್ಜಾಗಿದೆ.

Video Top Stories