ಕದನ ಕಣದಲ್ಲಿ ಇಂದಿನಿಂದ 'ಕೇಸರಿ' ನಾಯಕರ ಅಸಲಿ ಗೇಮ್‌..ಪ್ರಚಾರ ಅಖಾಡಕ್ಕೆ ಇಳಿದ 'ಚುನಾವಣಾ ಚಾಣಕ್ಯ'

ಇಂದಿನಿಂದ ಕರ್ನಾಟಕ ಕುರುಕ್ಷೇತ್ರದಲ್ಲಿ ಕೇಸರಿ ನಾಯಕರ ಅಸಲೀ ಆಟ ಶುರುವಾಗಲಿದೆ.ಪ್ರಧಾನಿ ನರೇಂದ್ರ ಮೋದಿ ಸೇರಿಸಂತೆ ಹಲವು ಹೈಕಮಾಂಡ್​​ ನಾಯಕರು ಕರ್ನಾಟಕಕ್ಕೆಬರಲಿದ್ದಾರೆ. ಇಂದು  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. 

First Published Apr 21, 2023, 11:35 AM IST | Last Updated Apr 21, 2023, 11:35 AM IST

ಇಂದಿನಿಂದ ಕರ್ನಾಟಕ ಕುರುಕ್ಷೇತ್ರದಲ್ಲಿ ಕೇಸರಿ ನಾಯಕರ ಅಸಲೀ ಆಟ ಶುರುವಾಗಲಿದೆ.ಪ್ರಧಾನಿ ನರೇಂದ್ರ ಮೋದಿ ಸೇರಿಸಂತೆ ಹಲವು ಹೈಕಮಾಂಡ್​​ ನಾಯಕರು ಕರ್ನಾಟಕಕ್ಕೆಬರಲಿದ್ದಾರೆ. ಇಂದು  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಚುನಾವಣಾ ಚಾಣಕ್ಯ ಅಮಿತ್​ ಶಾ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದರೇ, ಜಗತ್ ಪ್ರಕಾಶ್ ನಡ್ಡಾ ಬೀದರ್ ಜಿಲ್ಲೆಗೆ ಆಗಮಿಸಲಿದ್ದಾರೆ. ಚುನಾವಣಾ ಚಾಣಕ್ಯ ಅಮಿತ್​ ಶಾ ಮಧ್ಯಾಹ್ನ 3:20 ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿದ್ದು  ಮಧ್ಯಾಹ್ನ 3.45ಕ್ಕೆ ದೇವನಹಳ್ಳಿಯಲ್ಲಿ ಅಮಿತ್ ಶಾ ಅವರ ರೋಡ್​ ಶೋ ನಡೆಯಲಿದೆ. ಹಾಗೇ  ಸಂಜೆ ಅಮಿತ್‌ ಶಾ ಅವರು ಬಿಜೆಪಿಯ ಹಿರಿಯ ಮುಖಂಡರ ಜತೆ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮುಂದಿನ ಎರಡು ದಿನಗಳ ಕಾಲ ಅಮಿತ್‌ ಶಾ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.