News Hour: ಕಾಂಗ್ರೆಸ್‌ ಕೊರಳಿಗೆ ಮೋದಿ 'ವಿಷಸರ್ಪ' ಕಟ್ಟಿದ ಮಲ್ಲಿಕಾರ್ಜುನ!

ಮೌತ್‌ ಕಾ ಸೌದ್‌ಗಾರ್‌, ಚಾಯ್‌ವಾಲಾ ಹೀಗೆ ಕಾಂಗ್ರೆಸ್‌ ಪಕ್ಷ ಮಾಡಿದ್ದ ಹಲವು ಟೀಕೆಗಳನ್ನು ಚುನಾವಣೆ ಗೆಲ್ಲಲು ವೇದಿಕೆಯನ್ನಾಗಿ ಮಾಡಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್‌ ಮತ್ತೊಮ್ಮೆ ಅಂಥದ್ದೇ ಟೀಕೆ ಮಾಡಿ ಸುದ್ದಿಯಾಗಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಏ.27): ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷಸರ್ಪ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಟೀಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಹಾಗಂತ ಕಾಂಗ್ರೆಸ್‌ ಮೋದಿ ವಿರುದ್ಧ ಟೀಕೆ ಮಾಡಿದ್ದು ಇದೇ ಮೊದಲೇನಲ್ಲ..

ಈ ಹಿಂದೆಯೂ ಹಲವು ಬಾರಿ ಕಾಂಗ್ರೆಸ್‌ ಪಕ್ಷ ಮೋದಿ ವಿರುದ್ಧವಾಗಿ ಟೀಕೆಗಳನ್ನು ಮಾಡಿತ್ತು. ತೀರಾ ಇತ್ತೀಚೆಗೇ 'ಮೋದಿ ತೇರಾ ಖಬ್ರ ಖುದೇಂಗೆ' ಅಂದರೆ ಮೋದಿ ನಿನ್ನ ಸಮಾಧಿ ತೋಡುತ್ತೇವೆ ಎಂದು ಹೇಳಿದ್ದನ್ನೂ ಪ್ರಧಾನಿ ಚುನಾವಣೆಯ ಪ್ರಚಾರಕ್ಕೆ ಬಳಸಿಕೊಂಡಿದ್ದರು. ಈಗ ಸ್ವತಃ ಕಾಂಗ್ರೆಸ್‌ ಅಧ್ಯಕ್ಷ ಮೋದಿ ವಿಷಕಾರಿ ಹಾವು ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

Party Rounds: ಟೀಕಿಸುವ ಭರದಲ್ಲಿ ಮೋದಿಯನ್ನು ವಿಷದ ಹಾವಿಗೆ ಹೋಲಿಸಿದ ಖರ್ಗೆ! ಬಳಿಕ ಯೂಟರ್ನ್!

ಇನ್ನೊಂದೆಡೆ ಇಂದು ಕರಾವಳಿ ಭಾಗದಲ್ಲಿ ರಾಹುಲ್‌ ಗಾಂಧಿ ಸಮಾವೇಶ ನಡೆಸಿದರು. ಇದೇ ವೇಳೆ ಮೀನುಗಾರರಿಗೆ ಮೂರು ಭರವಸೆಗಳನ್ನು ನೀಡಿದರು. ನಾಳೆಯೂ ಕೂಡ ರಾಹುಲ್‌ ಗಾಂಧಿ ಕರ್ನಾಟಕದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

Related Video