News Hour: ಕರ್ನಾಟಕ ಕದನ ಕಣಕ್ಕೆ ಕೇಸರಿ ಕಲಿಗಳ ಎಂಟ್ರಿ!

ಕರ್ನಾಟಕ ಕದನ ಕಣಕ್ಕೆ ಬಿಜೆಪಿಯ ಕಲಿಗಳ ಎಂಟ್ರಿ ಆಗಿದೆ. ಚುನಾವಣಾ ಚಾಣಕ್ಯ ದಕ್ಷಿಣ ಕರ್ನಾಟಕದ ಬೆಂಗೂರಿಗೆ ಆಗಮಿಸಿದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಉತ್ತರ ಕರ್ನಾಟಕದ ಬಿಜೆಪಿಯಲ್ಲಿ ಮತಬೇಟೆ ನಡೆಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಏ.21): ಕರ್ನಾಟಕಕ್ಕೆ ಬಿಜೆಪಿಯ ಕದನ ಕಲಿಗಳ ಎಂಟ್ರಿಯಾಗಿದೆ. ಶುಕ್ರವಾರ ಉತ್ತರದ ಬೀದರ್‌ನಲ್ಲಿ ಜೆಪಿ ನಡ್ಡಾ ಹಾಗೂ ದಕ್ಷಿಣದ ಬೆಂಗಳೂರಿನಲ್ಲಿ ಅಮಿತ್‌ ಶಾ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಬೀದರ್‌ನಲ್ಲಿ ಜೆಪಿ ನಡ್ಡಾ ಮಠಗಳಿಗೆ ಭೇಟಿ ನೀಡಿದರೆ, ಅಮಿತ್‌ ಶಾ ಬೆಂಗಳೂರಿನಲ್ಲಿ ಬ್ಯಾಕ್‌-ಟು-ಬ್ಯಾಕ್‌ ಮೀಟಿಂಗ್‌ ನಡೆಸಿದ್ದಾರೆ.

ಆದರೆ, ಇಂದು ಅಮಿತ್‌ ಶಾ ಅವರ ಕಾರ್ಯಕ್ರಮಗಳು ನಿಗದಿಯಂತೆ ನಡೆಯಲಿಲ್ಲ. ಪಿಳ್ಳ ಮುನಿಶಾಮಪ್ಪ ಪರವಾಗಿ ಮತಯಾಚನೆಗೆ ಆಗಮಿಸಿದ್ದ ಅಮಿತ್‌ ಶಾ ದೇವನಹಳ್ಳಿಯಲ್ಲಿ ರೋಡ್‌ ಶೋ ಮಾಡಬೇಕಿತ್ತು. ಆದರೆ, ಮಳೆಯ ಕಾರಣದಿಂದ ಅದು ಸಾಧ್ಯವಾಗಲಿಲ್ಲ.

JanaMata: ಬಿಜೆಪಿಗೆ ಮೀಸಲಾತಿ ನಿರ್ಧಾರವೇ ಇಂಜಿನ್‌, ಉಳಿದವು ಬರೀ ಕರಪ್ಷನ್‌!

ಇನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಬೀದರ್‌ನಲ್ಲಿ ಶಕ್ತಿ ಪ್ರದರ್ಶನ ಮಾಡಿದರು. ಈಶ್ವರ್‌ ಸಿಂಗ್‌ ಠಾಕೂರ್‌ ಪರವಾಗಿ ಅವರು ಮತಬೇಟೆ ಆರಂಭಿಸಿದರು. ಮಠಗಳ ಭೇಟಿ, ರೋಡ್‌ ಶೋ ಹಾಗೂ ಸಂವಾದ ಕಾರ್ಯಕ್ರಮವನ್ನು ನಡೆಸಿದ್ದಾರೆ.

Related Video