ಕಾಂಗ್ರೆಸ್‌ ವಿರುದ್ಧ ಗ್ಯಾರಂಟಿ ಹೋರಾಟಕ್ಕೆ ಜೆಡಿಎಸ್‌ ಸಜ್ಜು: ಲೋಕಸಭೆ ಗೆಲ್ಲಲು ದಳಪತಿಗಳ ಹೊಸ ಅಸ್ತ್ರ

ಸರ್ಕಾರದ ವಿರುದ್ಧ ವಿಪಕ್ಷವಾಗಿ ಮುಗಿಬೀಳುವುದಕ್ಕೆ ಜೆಡಿಎಸ್‌ ಪ್ಲಾನ್‌ ಮಾಡಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ ಡ್ಯಾಮೇಜ್‌ಗೆ ಜೆಡಿಎಸ್‌ ರಣತಂತ್ರವನ್ನ ಹೆಣೆಯುತ್ತಿದೆ. ಪ್ರಾಬಲ್ಯ ಕಳೆದಕೊಂಡ ಕಡೆ ಗೆಲ್ಲೋದಕ್ಕೆ ಕುಮಾರಸ್ವಾಮಿ ಅಸ್ತ್ರ ಪ್ರಯೋಗಿಸ್ತಾ ಇದಾರೆ. 

First Published Jun 2, 2023, 11:20 AM IST | Last Updated Jun 2, 2023, 11:20 AM IST

ಬೆಂಗಳೂರು(ಜೂ.02):  ವಿಧಾನಸಭೆಯಲ್ಲಿ ಸೋತ ಜೆಡಿಎಸ್‌ಗೆ ಲೋಕಸಭೆಯೇ ಈಗ ಟಾರ್ಗೆಟ್‌ ಆಗಿದೆ. ರಾಜ್ಯದಲ್ಲಿ ಇಂಪ್ಯಾಕ್ಟ್‌ ಮೂಡಿಸೋದಕ್ಕೆ ದಳಪತಿಗಳು ಮುಂದಾಗಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಘೋಷಣೆಯೇ ಈಗ ಜೆಡಿಎಸ್‌ನ ಹೊಸ ಅಸ್ತ್ರವಾಗಿದೆ. ಸರ್ಕಾರದ ವಿರುದ್ಧ ವಿಪಕ್ಷವಾಗಿ ಮುಗಿಬೀಳುವುದಕ್ಕೆ ಜೆಡಿಎಸ್‌ ಪ್ಲಾನ್‌ ಮಾಡಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ ಡ್ಯಾಮೇಜ್‌ಗೆ ಜೆಡಿಎಸ್‌ ರಣತಂತ್ರವನ್ನ ಹೆಣೆಯುತ್ತಿದೆ. ಪ್ರಾಬಲ್ಯ ಕಳೆದಕೊಂಡ ಕಡೆ ಗೆಲ್ಲೋದಕ್ಕೆ ಕುಮಾರಸ್ವಾಮಿ ಅಸ್ತ್ರ ಪ್ರಯೋಗಿಸ್ತಾ ಇದಾರೆ. ಕಾಂಗ್ರೆಸ್‌ ಹೇಳಿದ ಗ್ಯಾರಂಟಿ ಘೋಷಣೆಗಳ ಅನುಷ್ಠಾನಕ್ಕೆ ಜೆಡಿಎಸ್‌ ಪಟ್ಟು ಹಿಡಿಯೋದಕ್ಕೆ ಮುಂದಾಗಿದ್ದು, ಘೋಷಿತ ಯೋಜನೆ ಉಚಿತವಾಗಿ ಕೊಡುವಂತೆ ಆಗ್ರಹಿಸುತ್ತಿದೆ.

News Hour: ಗ್ಯಾರಂಟಿ ಕ್ಯಾಬಿನೆಟ್‌ಗೆ ಸಜ್ಜಾದ ಸರ್ಕಾರ, ಜಟಾಪಟಿಗೆ ರೆಡಿಯಾದ ವಿಪಕ್ಷ!