Asianet Suvarna News Asianet Suvarna News

'ಕನ್ನಡ ಪಂಡಿತರು ಅಂದ್ಕೊಂಡಿದ್ದೆ, ಸಿದ್ಧರಾಮಯ್ಯರಿಗೆ ಕನ್ನಡ ಬರಲ್ವಾ?' ಎಚ್‌ಡಿಕೆ ಪ್ರಶ್ನೆ!

ತಾವೊಬ್ಬ ಕನ್ನಡ ಪಂಡಿತ ಅನ್ನೋ ರೀತಿಯಲ್ಲಿ ಮಾತನಾಡುವ ಸಿಎಂ ಸಿದ್ಧರಾಮಯ್ಯಗೆ ಕನ್ನಡ ಭಾಷೆ ಅರ್ಥವಾಗೋದಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು (ಜು.17): ಪಂಚರತ್ನ ಜಾರಿಯಾಗದೇ ಇದ್ದಲ್ಲಿ ಜೆಡಿಎಸ್‌ ಪಕ್ಷ ವಿಸರ್ಜನೆ ಮಾಡ್ತೇನೆ ಅಂದಿದ್ದೆ. 123 ಸೀಟು ಬರದೇ ಇದ್ದಲ್ಲಿ ವಿಸರ್ಜನೆ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿರಲಿಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ತನ್ನನ್ನು ತಾನು ಕನ್ನಡ ಪಂಡಿತ ಅಂತಾ ಸಿದ್ಧರಾಮಯ್ಯ ಹೇಳ್ತಾರೆ. ಅವರಿಗೇನು ಕನ್ನಡ ಬರೋದಿಲ್ವಾ? ಎಂದು ಸಿದ್ಧರಾಮಯ್ಯ ವಿರುದ್ಧ ಎಚ್‌ಡಿಕೆ ಲೇವಡಿ ಮಾಡಿದ್ದಾರೆ. ದೇವರಾಜು ಅರಸು ನಂತ್ರ 2ನೇ ಬಾರಿಗೆ ಸಿಎಂ ಆಗಿದ್ದೀರಿ ಅಂತಾ ಹೇಳ್ಕೊಂಡು ತಿರುಗಾಡ್ತಾ ಇದ್ದೀರಿ, ಇದರಿಂದ ಜನರಿಗೆ ಏನ್‌ ಸಂದೇಶ ಕೊಡೋಕೆ ಹೊರಟಿದ್ದೀರಿ ಅದನ್ನು ಹೇಳಿ ಎಂದು ಎಚ್‌ಡಿಕೆ ಹೇಳಿದ್ದಾರೆ.

'ನಾನು ಸಿಎಂ ಆಗಿದ್ದಾಗ ಎಲ್ಲರೂ ನನ್ನ ಕೈ ಕೂಡ ಹೀಗೆ ಎತ್ತಿದ್ರು..' ಮಹಾಘಟಬಂದನ್‌, ಕಾಂಗ್ರೆಸ್‌ಗೆ ಎಚ್‌ಡಿಕೆ ಟೀಕೆ!

ಇದು ನನ್ನ ಕೊನೆ ಚುನಾವಣೆ ಅಂತಾ ಹೇಳಿದ್ದೀರಿ. ಜನರ ಬಳಿ ಒಳ್ಳೆಯ ಹೆಸರು ತೆಗೆದುಕೊಂಡು ಅಧಿಕಾರ ಮಾಡಿ. ಯಾವ ಸರ್ಕಾರದ ಮೇಲೂ ಈ ರೀತಿಯ ಆರೋಪಗಳನ್ನು ನಾನೆಲ್ಲೂ ಕೇಳಿರಲಿಲ್ಲ ಎಂದು ಎಚ್‌ಡಿಕೆ ಹೇಳಿದ್ದಾರೆ.

Video Top Stories