Rajya Sabha Poll ಡೈನಿಂಗ್ ಟೇಬಲ್ ಪಾಲಿಟಿಕ್ಸ್ ಸೋತಿದ್ದು ಎಲ್ಲಿ? ದಾರಿ ತಪ್ಪಿದರಾ ದಳಪತಿಗಳು?

ರಾಜ್ಯ ಸಭಾ ಚುನಾವಣೆ ಬಿಜೆಪಿಗೆ ಬಂಪರ್ ಕೊಟ್ಟಿದ್ರೆ ಕಾಂಗ್ರೆಸ್ ತನ್ನ ಶಕ್ತಿಗನುಸಾರವಾಗಿ ಒಂದು ಸೀಟ್ ಪಡೆದುಕೊಂಡಿದೆ. ಆದ್ರೆ ಜೆಡಿಎಸ್ ಪಾಪರ್ ಆಗಿದೆ.. ಅಸಲಿಗೆ ಒಂದು ಸೀಟ್ ಪಡೆಯೋಕೆ ಕೂಡ ಸಂಖ್ಯಾ ಬಲ ಅವರಲ್ಲಿ ಇರ್ಲಿಲ್ಲಾ.. ಕಾಂಗ್ರೆಸ್ನ ಹೆಚ್ಚುವರಿ ಮತಗಳ ನಿರೀಕ್ಷೆಯಲ್ಲಿದ್ದ ಜೆಡಿಎಸ್ಗೆ ಭಾರಿ ನಿರಾಸೆ ಮೂಡಿದೆ. ಆದ್ರೆ ಈಗ ದಳಪತಿಗಳ ಮಧ್ಯ ಜೋರಾದ ಯುದ್ಧವೊಂದು ಶುರುವಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.12): ರಾಜ್ಯ ಸಭಾ ಚುನಾವಣೆ ಬಿಜೆಪಿಗೆ ಬಂಪರ್ ಕೊಟ್ಟಿದ್ರೆ ಕಾಂಗ್ರೆಸ್ ತನ್ನ ಶಕ್ತಿಗನುಸಾರವಾಗಿ ಒಂದು ಸೀಟ್ ಪಡೆದುಕೊಂಡಿದೆ. ಆದ್ರೆ ಜೆಡಿಎಸ್ ಪಾಪರ್ ಆಗಿದೆ.. ಅಸಲಿಗೆ ಒಂದು ಸೀಟ್ ಪಡೆಯೋಕೆ ಕೂಡ ಸಂಖ್ಯಾ ಬಲ ಅವರಲ್ಲಿ ಇರ್ಲಿಲ್ಲಾ.. ಕಾಂಗ್ರೆಸ್ನ ಹೆಚ್ಚುವರಿ ಮತಗಳ ನಿರೀಕ್ಷೆಯಲ್ಲಿದ್ದ ಜೆಡಿಎಸ್ಗೆ ಭಾರಿ ನಿರಾಸೆ ಮೂಡಿದೆ. ಆದ್ರೆ ಈಗ ದಳಪತಿಗಳ ಮಧ್ಯ ಜೋರಾದ ಯುದ್ಧವೊಂದು ಶುರುವಾಗಿದೆ.

ಕುಮಾರಣ್ಣ-ದೇವೇಗೌಡ್ರ ಕಣ್ಣಲ್ಲಿ ನೀರು ಹಾಕಿಸಿದ್ದೀರಾ, ಅದಕ್ಕೆ ನೀವು ಬೆಲೆ ತೆರಲೇಬೇಕು, ಸಿದ್ದುಗೆ ಎಚ್ಚರಿಕೆ

ರಾಜ್ಯಸಭಾ ಚುನಾವಣೆ ಜೆಡಿಎಸ್​ ಪಕ್ಷದ ಒಳಗೆ ಇದ್ದ ಭಿನ್ನಮತವನ್ನ ಸ್ಫೋಟ ಮಾಡಿದೆ ಅಂದ್ರೂ ತಪ್ಪಾಗೋದಿಲ್ಲಾ.. ಈಗ ನಡೀತಾ ಇರೋ ಭೀಕರ ವಾಕ್ಸಮರಕ್ಕೆ ಕಾರಣವಾಗಿದ್ದು ಎರಡು ಓಟುಗಳು, ಇಬ್ಬರು ಶ್ರೀನಿವಾಸರು.. ಯಸ್.. ಗುಬ್ಬಿ ಹಾಗೂ ಕೋಲಾರ ಶಾಸಕರಿಂದ ಕ್ರಾಸ್ ಓಟ್ ಆಗಿದ್ದೇ ಆಗಿದ್ದು ಕುಮಾರಸ್ವಾಮಿಯವರು ಫುಲ್ ಗರಂ ಆಗಿದ್ದಾರೆ.

Related Video