Council Election : ಒಂದೇ ಕಲ್ಲಿಗೆ ಮೂರು ಹಕ್ಕಿ - ದಳಪತಿಗಳ ಕುತೂಹಲದ ಪಾಲಿಟಿಕ್ಸ್
ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ರಾಜಕೀಯ ನಡೆಯುತ್ತಿದೆಯಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ. ಜೆಡಿಎಸ್ ಒಂದೇ ಕಲ್ಲಿಗೆ ಮೂರು ಮೂರು ಹಕ್ಕಿ ಹೊಡೆಯುತ್ತಿದೆಯಾ..? ಪರಿಷತ್ ಚುನಾವಣೆಯಲ್ಲಿ ರಾಜಕೀಯ ಏನು ಎನ್ನುವ ಕುತೂಹಲ ಮೂಡಿದೆ.
ಬೆಂಗಳೂರು (ನ.24): ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಮೈತ್ರಿ ರಾಜಕೀಯ (Politics) ನಡೆಯುತ್ತಿದೆಯಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ. ಜೆಡಿಎಸ್ (JDS) ಒಂದೇ ಕಲ್ಲಿಗೆ ಮೂರು ಮೂರು ಹಕ್ಕಿ ಹೊಡೆಯುತ್ತಿದೆಯಾ..? ಪರಿಷತ್ ಚುನಾವಣೆಯಲ್ಲಿ ರಾಜಕೀಯ ಏನು ಎನ್ನುವ ಕುತೂಹಲ ಮೂಡಿದೆ. ತೆರೆ ಮರೆಯಲ್ಲಿ ಬಿಜೆಪಿಗೆ (BJP) ಜೆಡಿಎಸ್ (JDS) ಬೆಂಬಲ ನೀಡುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಸದ್ಯ 7 ಅಭ್ಯರ್ಥಿಗಳ ಹೆಸರಿನ ಪಟ್ಟಿಯನ್ನಷ್ಟೇ ಬಿಡುಗಡೆ ಮಾಡಿದ್ದು, ಈ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಾಗಿದೆ.
MLC Election: ಪರಿಷತ್ ಅಖಾಡದಲ್ಲಿ ದಳಪತಿಗಳೇ ಕಿಂಗ್ ಮೇಕರ್ ಆದ್ರಾ?
ಇನ್ನು ಪಕ್ಷ ತೊರೆದವರಿಗೂ ಮುಖಂಡರು ಶಾಕ್ ಕೊಟ್ಟಿದ್ದಾರೆ. ಜೆಡಿಎಸ್ ಗಟ್ಟಿ ಇರುವ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂದೇಶ್ ನಾಗರಾಜ್ ಮನೋಹರ್ ಅವರಿಗೆ ಟಿಕೆಟ್ ತಪ್ಪಿಸಿದ್ದು ಜೆಡಿಎಸ್ ಮುಖಂಡರೇನಾ ಎನ್ನುವ ಪ್ರಶ್ನೆಯೂ ಮೂಡಿದೆ.