ಜೆಡಿಎಸ್-ಬಿಜೆಪಿ ಮೈತ್ರಿ ಮುರಿಯುತ್ತಾ? ಕುಮಾರಸ್ವಾಮಿ ಹೇಳಿಕೆಯ ಒಳಮರ್ಮವೇನು?
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು. ಆದರೆ ಈಗ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಿಂದ ಮೈತ್ರಿ ಮುರಿಯುತ್ತದೆಯೇ ಎಂಬ ಅನುಮಾನ ಶುರುವಾಗಿದೆ. ಕುಮಾರಸ್ವಾಮಿ ಅವರ ಹೇಳಿಕೆಗಳು ಮೈತ್ರಿಯ ಭವಿಷ್ಯದ ಬಗ್ಗೆ ಸುಳಿವು ನೀಡುತ್ತಿವೆಯೇ?
ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಎನ್‌ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್ ಮೈತ್ರಿಯಾಗಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದೆ. ಇದೀಗ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೇಂದ್ರದ ಎನ್‌ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಆದರೆ, ಈಗ ಕರ್ನಾಟಕದಲ್ಲಿ ಉಪ ಚುನಾವಣೆ ಎದುರಾಗಿದ್ದು, ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಮೈತ್ರಿ ಮತ್ತು ಪಕ್ಷದ ಧರ್ಮ ಮುರಿದು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇದರಿಂದ ಕೇವಲ ಒಂದು ವರ್ಷದ ಹಿಂದೆ ಏರ್ಪಟ್ಟಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಮುರಿದುಬೀಳುತ್ತಾ ಎಂಬ ಅನುಮಾನ ಎದುರಾಗಿದೆ. ಈ ಅನುಮಾನಕ್ಕೆ ಕಾರಣವಾಗಿದ್ದು ಮಾತ್ರ ಜೆಡಿಎಸ್ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಅವರ ಆ ಒಂದು ಮಾತು...!
ಇದ್ದಕ್ಕಿದ್ದ ಹಾಗೇ ಇಂಥದ್ದೊಂದು ಪ್ರಶ್ನೆ, ರಾಜ್ಯವನ್ನೆಲ್ಲಾ ಆವರಿಸಿಬಿಟ್ಟಿದೆ.. ಲೋಕಲಡಾಯಿಯ ಹೊತ್ತಲ್ಲಿ ಒಂದಾಗಿದ್ದ ಜೆಡಿಎಸ್ ಹಾಗೂ ಬಿಜೆಪಿ ನಡುವೆ, ಈಗ ವೈಮನಸ್ಸು ಉಂಟಾಯ್ತಾ? ಅಥವಾ ವೈರುಧ್ಯ ಹೆಚ್ಚಾಯ್ತಾ? ಇಂಥಾ ಸಾಕಷ್ಟು ಅನುಮಾನಗಳಿಗೆ, ಸಿಪಿ ಯೋಗೇಶ್ವರ್ ಅವರ ಚೆಕ್ ಮೇಟ್ ಕಾರಣವಾಗಿಬಿಟ್ಟಿದೆ.. ಅಷ್ಟಕ್ಕೂ ಬಿಜೆಪಿ ನಾಯಕರೊಬ್ರು, ಕಾಂಗ್ರೆಸ್ ಸೇರೋದಕ್ಕೂ, ಮೈತ್ರಿಧರ್ಮದ ಪಾಲನೆ ಬಗ್ಗೆ ಚರ್ಚೆಯಾಗೋದಕ್ಕೂ, ರಾಜ್ಯ ಬಿಜೆಪಿ ಒಳಗಿನ ಬೇಗುದಿಗೂ ಏನು ನಂಟು..? ಇದೆಲ್ಲದರ ಬಗ್ಗೆ ಊಹಾಪೋಹ ಹುಟ್ಟಿಕೊಂಡಿದ್ದು ಎಲ್ಲಿಂದ? ಇದರ ಅಸಲಿಯತ್ತೇನು? ಅದೆಲ್ಲದರ ವಿವರ ಇಲ್ಲಿದೆ ನೋಡಿ..
ಇದನ್ನೂ ಓದಿ: ಕಾಂಗ್ರೆಸ್ ಗೂಡಿಗೆ ಹಾರಿದ ವಲಸೆ ಹಕ್ಕಿ: ಹಳೇ ಮೈಸೂರಲ್ಲಿ ನಾವಿಕನಿಲ್ಲದ ಹಡಗಿನಂತಾದ ಬಿಜೆಪಿ!
ಕುಮಾರಸ್ವಾಮಿ ಅವರ ಮಾತಿಗೂ, ರಾಜ್ಯ ಬಿಜೆಪಿ ನಾಯಕರ ಹೇಳಿಕೆಗೂ ಎಲ್ಲೋ ಮಿಸ್ಸಿಂಗ್ ಲಿಂಕ್ ಇದ್ದ ಹಾಗಿದೆಯಲ್ಲಾ. ಅದಕ್ಕೆ ಕಾರಣವೇನು? ಯೋಗೇಶ್ವರ್ ಅವರ ತೀರ್ಮಾನ, ರಾಜ್ಯದಲ್ಲಿ ಮೈತ್ರಿ ಭವಿಷ್ಯ ನಿರ್ಧರಿಸತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಯೋಗೇಶ್ವರ್ ಈಗ ಕಾಂಗ್ರೆಸ್ ಪಡೆ ಸೇರಿದ್ದಾಗಿದೆ. ಅವರ ವಿರುದ್ಧ ಸಮರ್ಥ ಎದುರಾಳಿನಾ ಕಣಕ್ಕಿಳಿಸೋ ಹೊಣೆ, ಜೆಡಿಎಸ್ ಹೆಗಲೇರಿದೆ. ಜೆಡಿಎಸ್‌ನಿಂದ ಯಾರೇ ರಣಕಣಕ್ಕೆ ಕಾಲಿಟ್ರೂ, ಅವರನ್ನ ಗೆಲ್ಲಿಸಿಕೊಡಬೇಕಾದ ಕರ್ತವ್ಯ, ಬಿಜೆಪಿದು.. ಈ ಪ್ರಶ್ನೆ ನಿಮ್ಮನ್ನ ಕಾಡುತ್ತಿದ್ದರೆ, ಅದಕ್ಕೊಂದು ಅಚ್ಚರಿಯ ಉತ್ತರ ಇದೆ. ಚನ್ನಪಟ್ಟಣ ಚುನಾವಣೆ ಹೊತ್ತಲ್ಲಿ, ಕುಮಾರಸ್ವಾಮಿ ಅವರು ಆಡ್ತಾ ಇರೋ ಮಾತುಗಳು, ಬರೀ ಆ ಕ್ಷೇತ್ರದ ಚುನಾವಣೆನ ದೃಷ್ಟಿಲಿಟ್ಕೊಂಡು ಆಡ್ತಾ ಇರೋ ಹಾಗಿಲ್ಲ.. ಆ ಮಾತುಗಳಲ್ಲಿ, ಮೈತ್ರಿಯ ಭವಿಷ್ಯ ಕೂಡ ಇಣುಕಿ ನೋಡ್ತಾ ಇದೆ.