Asianet Suvarna News Asianet Suvarna News

ಡಿಕೆಶಿ ರಾಜಕಾರಣದಲ್ಲಿರಲು ನಾಲಾಯಕ್‌: ರಮೇಶ್ ಜಾರಕಿಹೊಳಿ ಗುಡುಗು

ನನ್ನ ಹತ್ತಿರ ಸಿಡಿ ಇದೆ, ಆದ್ರೆ ರಿಲೀಸ್‌ ಮಾಡಲ್ಲ‌ ಆಡಿಯೋ ವಿಡಿಯೋ ಎಲ್ಲವನ್ನು ಸಿಬಿಐಗೆ ಕೊಡುವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
 

ರಮೇಶ್‌ ಜಾರಕಿಹೊಳಿ ಸಿಡಿ ಬಾಂಬ್‌ ಠುಸ್ ಆಯ್ತಾ ಎಂಬ ಅನುಮಾನ ಮೂಡಿದ್ದು, ಅವರು ಯಾವುದೇ ಸಿಡಿಯನ್ನು ರಿಲೀಸ್‌ ಮಾಡಲಿಲ್ಲ. ನನ್ನ ಬಳಿ 120 ದಾಖಲೆ ಇದೆ, ಯಾವುದನ್ನು ರಿಲೀಸ್‌ ಮಾಡಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ಇದು ಡಿಕೆಶಿ ಮತ್ತು ರಮೇಶ್‌ ಜಾರಕಿಹೊಳಿ ನಡುವಿನ ಯುದ್ಧ, ನಾನು ಚುನಾವಣೆ ಟೈಂನಲ್ಲಿ ಹೊಡೆಯುತ್ತಿದ್ದೇನೆ ಎಂದರು.  ಡಿ.ಕೆ ಶಿವಕುಮಾರ್ ರಾಜಕಾರಣದಲ್ಲಿರಲು ನಾಲಾಯಕ್‌, ನಾನು ಇವತ್ತು ಸಿಡಿ ಬಿಡುಗಡೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.