ಬಿಎಂಟಿಸಿ ಇಟಿಎಂ ಮಷಿನ್ ವಿಫಲ: ಐದು ನಿಮಿಷ ಕಾದ್ರೂ ಬರಲ್ಲ ಟಿಕೆಟ್
ಬಿಎಂಟಿಸಿ ಜಾರಿಗೆ ತರುವ ತಂತ್ರಜ್ಞಾನಗಳು, ಕೆಲವು ತಿಂಗಳಿಗೆ ಮಾತ್ರ ಸೀಮಿತನಾ ಎಂಬ ಪ್ರಶ್ನೆ ಮೂಡಿದೆ. ಕ್ಯೂ ಆರ್ ಸ್ಕ್ಯಾನ್ ಮಾಡಿ ಟಿಕೆಟ್ ತೆಗೆದುಕೊಳ್ಳಿ ಅಂತಿದ್ದವರು, ಇದೀಗ ಗಪ್ ಚುಪ್ ಆಗಿದ್ದಾರೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್ ಕೈಗೆ ಕೊಟ್ಟಿದ್ದ ಟಿಕೆಟ್ ಇಟಿಎಂ ಮಷಿನ್ ವಿಫಲವಾಗಿದೆ. ಹೊಸ ತಂತ್ರಜ್ಞಾನದೊಂದಿಗೆ ಹೊಸ ಇಟಿಎಂ ಕೊಡುತ್ತೇವೆ ಎಂದಿದ್ದ ಬಿಎಂಟಿಸಿ, ಎಂಟು ಸಾವಿರ ಇಟಿಎಂ ಟಿಕೆಟ್ ಮಷಿನ್ ಖರೀದಿಸಿತ್ತು. Pinelabs ಕಂಪನಿಯಿಂದ ಇಟಿಎಂ ಟಿಕೆಟ್ ಮಷಿನ್'ಗಳನ್ನು ಒಂದು ವರ್ಷ ಅವಧಿಗೆ ಬಾಡಿಗೆ ಆಧಾರದಲ್ಲಿ ಖರೀದಿ ಮಾಡಲಾಗಿತ್ತು. ಆಂಡ್ರಾಯ್ಡ್ ತಂತ್ರಜ್ಞಾನದ ಇಟಿಎಂ ಮಷಿನ್, ಟಿಕೆಟ್ ಕೊಡುವಾಗ ಸಂಪೂರ್ಣ ವಿಫಲವಾಗಿದೆ. ಐದು ನಿಮಿಷ ಕಾದ್ರೂ ಇಟಿಎಂ ಮಷಿನ್'ನಲ್ಲಿ ಕೆಲವೊಮ್ಮೆ ಟಿಕೆಟ್ ಬರಲ್ಲ.