Asianet Suvarna News Asianet Suvarna News

ಚನ್ನಪಟ್ಟಣ ಕ್ಷೇತ್ರ ಗೆಲ್ಲಲು ಡಿಕೆಶಿ ರಣತಂತ್ರ: ಮೂರು ದಿನಗಳ ಕಾಲ ಜನಸ್ಪಂದನ ಕಾರ್ಯಕ್ರಮ

ನಾಳೆಯಿಂದ ಮೂರು ದಿನಗಳ ಕಾಲ ಚನ್ನಪಟ್ಟಣ ಪ್ರವಾಸವನ್ನು ಡಿಕೆ ಶಿವಕುಮಾರ್‌ ಕೈಗೊಳ್ಳಲಿದ್ದು, ಈ ಮೂಲಕ ಮತದಾರರ ನಾಡಿಮಿಡಿತ ಅರಿಯಲು ಪ್ಲ್ಯಾನ್‌ ಮಾಡಿದ್ದಾರೆ. 

ಚನ್ನಪಟ್ಟಣ ಕ್ಷೇತ್ರ ಗೆಲ್ಲಲು ಡಿಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ರಣತಂತ್ರ ಹೂಡಿದ್ದು, ನಾಳೆಯಿಂದ ಮೂರು ದಿನ ಡಿಕೆಶಿ ಚನ್ನಪಟ್ಟಣ ಪ್ರವಾಸ(Channapatna tour) ಕೈಗೊಳ್ಳಲಿದ್ದಾರೆ. ಮೂರು ದಿನಗಳ ಕಾಲ ಜನಸ್ಪಂದನ ಕಾರ್ಯಕ್ರಮ(Janaspandana programme) ನಡೆಸಲಿದ್ದಾರೆ. ಗ್ರಾಮಾಂತರ ಸೋಲನ್ನು ಸವಾಲಾಗಿ ಸ್ವೀಕಾರ ಮಾಡಿರುವ‌ ಡಿಕೆ ಶಿವಕುಮಾರ್‌. ನಾಳೆಯಿಂದ ಮೂರು ದಿನಗಳ ಕಾಲ ಚನ್ನಪಟ್ಟಣ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂಲಕ ಚನ್ನಪಟ್ಟಣದ ಮತದಾರರ ನಾಡಿಮಿಡಿತ ಅರಿಯಲು ಪ್ಲ್ಯಾನ್‌ ಮಾಡಿದ್ದಾರೆ. ಮತ್ತೆ ಮತ್ತೆ ಚನ್ನಪಟ್ಟಣಕ್ಕೆ ಡಿಕೆಶಿ ಭೇಟಿ ನೀಡುತ್ತಿದ್ದು, ಬಹುತೇಕ ಡಿಕೆಶಿ ಹೆಸರೇ ಚನ್ನಪಟ್ಟಣ ಕ್ಕೆ ಅಂತಿಮ ಎಂಬ ಚರ್ಚೆ ಆರಂಭವಾಗಿದೆ. ಚನ್ನಪಟ್ಟಣವನ್ನು ಕಾಂಗ್ರೆಸ್‌ ತೆಕ್ಕೆಗೆ ಸೆಳೆಯಲು ರಣತಂತ್ರ ರೂಪಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಶವರ್ಮಾ‌ ತಯಾರಕರಿಗೆ ಶಾಕಿಂಗ್ ನ್ಯೂಸ್: ಇದರ ತಯಾರಿಕೆಗೆ ಬಳಸುವ ಬಣ್ಣ ಅಸುರಕ್ಷಿತ- ವರದಿ

Video Top Stories