Reddy VS Tangadagi: ಮೋದಿ ಅಂದ್ರೆ ಶಿವರಾಜ್‌ ತಂಗಡಗಿ ಕಿವಿಯಲ್ಲಿ ಮುಳ್ಳು ಚುಚ್ಚಿದಂತಾಗುತ್ತೆ:ಜನಾರ್ದನ ರೆಡ್ಡಿ

ಅಧಿಕಾರಕ್ಕೆ ಬರೋಕೆ ಆಗ್ತಿಲ್ಲ ಅಂತಾ ನನ್ನ ನಾಲ್ಕು ವರ್ಷ ಜೈಲಿನಲ್ಲಿ ಇಟ್ಟರು. ಈಗ ಬನ್ನಿ ಅಧಿಕಾರಕ್ಕೆ ಹೇಗೆ ಬರ್ತೀರೋ ಎಂದು ಜನಾರ್ದನ ರೆಡ್ಡಿ ಮತ್ತು ಶಿವರಾಜ್ ತಂಗಡಗಿ ಕೌಂಟರ್‌ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಜನಾರ್ದನ ರೆಡ್ಡಿ ಮತ್ತು ಶಿವರಾಜ್ ತಂಗಡಗಿ ನಡುವಿನ ಟಾಕ್‌ ಫೈಟ್‌ ಮತ್ತೆ ಜೋರಾಗಿದೆ. ಇತಿಹಾಸ ತೆಗೆದು ಬೆತ್ತಲೆ ಮಾಡ್ತಿನಿ ಎಂದು ಶಿವರಾಜ್‌ ತಂಗಡಗಿ(Shivaraj Tangadagi) ಹೇಳಿದ್ದರು. ಸಚಿವ ತಂಗಡಗಿ ಹೇಳಿಕೆಗೆ ಜನಾರ್ದನ ರೆಡ್ಡಿ(Janardhan Reddy) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌(Congress) ಅಧಿನಾಯಕರೇ ನನ್ನ ಬೆತ್ತಲೆ ಮಾಡೋಕೆ ಆಗಿಲ್ಲ. ಇನ್ನೂ ನೀನೇನ್‌ ಮಾಡ್ತಿಯಾ ? ಅಧಿಕಾರಕ್ಕೆ ಬರೋಕೆ ಆಗ್ತಿಲ್ಲ ಅಂತಾ ನನ್ನ ನಾಲ್ಕು ವರ್ಷ ಜೈಲಿನಲ್ಲಿ ಇಟ್ಟರು. ಈಗ ಬನ್ನಿ ಅಧಿಕಾರಕ್ಕೆ ಹೇಗೆ ಬರ್ತೀರೋ, ನಾನು ನೋಡ್ತಿನಿ. ಮೋದಿ ಅಂದ್ರೆ ತಂಗಡಗಿ ಕಿವಿಯಲ್ಲಿ ಮುಳ್ಳು ಚುಚ್ಚಿದಂತಾಗುತ್ತೆ. ಶಿವರಾಜ್‌ ತಂಗಡಗಿ ಎಷ್ಟು ತಲೆ ಕೆಟ್ಟಿರಬೇಕು ಯೋಚಿಸಿ ಎಂದು ಜನಾರ್ದನ ರೆಡ್ಡಿ ಕೌಂಟರ್‌ ಕೊಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  Bengaluru: ಬೆಂಗಳೂರು ಕೇಂದ್ರದ ಮತಪೆಟ್ಟಿಗೆಗಳು ಶಿಫ್ಟ್‌: ಸ್ಟ್ರಾಂಗ್ ರೂಮ್‌ನಲ್ಲಿ ಇವಿಎಂಗಳು, ಅಭ್ಯರ್ಥಿಗಳ ಭವಿಷ್ಯ ಭದ್ರ

Related Video