KGF Babu ಮನೆ ಮೇಲೆ ಐಟಿ ದಾಳಿ,ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗೆ ಶಾಕ್..!

ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾದ ಕೆಜಿಎಫ್‌ ಬಾಬು ಮನೆ ಮೇಲೆ ಐಟಿ ದಾಳಿ ನಡೆಸಿದ್ದು, ಬೆಳಂ ಬೆಳಗ್ಗೆಯೇ  ರೈಡ್​ ಮಾಡಲಾಗಿದೆ. 

Share this Video
  • FB
  • Linkdin
  • Whatsapp

ಇಂದು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಕೆಜಿಎಫ್‌ ಬಾಬು ಮನೆ ಮೇಲೆ ಐಟಿ ದಾಳಿ ನಡೆಸಿದ್ದು, ಬೆಳಂ ಬೆಳಗ್ಗೆಯೇ ರೈಡ್​ ಮಾಡಲಾಗಿದೆ. ಹೈಗ್ರೌಂಡ್ಸ್‌ ಬಳಿಯಿರುವ ಉದ್ಯಮಿ ಕೆಜಿಎಫ್ ಬಾಬು ಯಾನೆ ಯುಸೂಫ್ ಶರೀಫ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದ್ದಾರೆ. ಸರಿ ಸುಮಾರು ಸುಮಾರು 5.30ಕ್ಕೆ ಐಟಿ ಅಧಿಕಾರಿಗಳು ಕೆಜಿಎಫ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ಕೆಜಿಎಫ್ ಬಾಬು ಒಡೆತನದ ಇತರೆ ಆಸ್ತಿಗಳ ಮೇಲೆ ದಾಳಿ ನಡೆಸಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.ಇನ್ನು ಕೆಜಿಎಫ್​ ಬಾಬು ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿದ್ದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕೆಜಿಎಫ್​ ಬಾಬು ಪತ್ನಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇವಲ 20 ದಿನಗಳು ಮಾತ್ರ ಬಾಕಿ ಇದೆ. ಸಹಜವಾಗಿ ಎಲ್ಲೆಡೆ ರಾಜಕೀಯ ಪಕ್ಷಗಳ ಪ್ರಚಾರ ಜೋರಾಗಿದೆ. ಇದರ ನಡುವೆ ಐಟಿ ಅಧಿಕಾರಿಗಳು ಕೂಡ ಅಲರ್ಟ್ ಆಗಿದ್ದು ಪದೇ ಪದೇ ದಾಳಿ ನಡೆಸುತ್ತಿದ್ದಾರೆ.

Related Video