ಹನಿಟ್ರ್ಯಾಪ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್! ಮಧುಬೇಟೆ ಹಿಂದೆ ಪ್ರಭಾವಿ ಕೈ ನಾಯಕ?

ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸಿರುವ ಹನಿಟ್ರ್ಯಾಪ್ ಪ್ರಕರಣ | ಹನಿಟ್ರ್ಯಾಪ್ ಗ್ಯಾಂಗ್ ತೋಡಿದ್ದ ಖೆಡ್ಡಾಗೆ ಬಿದ್ದಿದ್ದ ಬಿಜೆಪಿ ಶಾಸಕರು | ಶಾಸಕರ ದೂರಿನ ಬೆನ್ನಲ್ಲೇ ಮಹಿಳೆ ಸೇರಿದಂತೆ ನಾಲ್ವರು ಪೊಲೀಸರ ಬಲೆಗೆ | ರಾಜಕೀಯ ಬಣ್ಣ ಪಡೆಯುತ್ತಿರುವ ಪ್ರಕರಣ

Share this Video
  • FB
  • Linkdin
  • Whatsapp

ಬೆಂಗಳೂರು (ನ.30): ರಾಜ್ಯ ರಾಜಕಾರಣವನ್ನು ಬೆಚ್ಚಿ ಬೀಳಿಸಿರುವ ಹನಿಟ್ರ್ಯಾಪ್ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಬಿಜೆಪಿ ಶಾಸಕರನ್ನೇ ಗುರಿಯಾಗಿಸಿ ನಡೆಸಲಾಗಿರುವ ಈ ಮಧುಬೇಟೆಯ ಹಿಂದೆ ಕಾಂಗ್ರೆಸ್ ನಾಯಕನ ಕೇವಾಡವಿದೆಯಾ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಉಪಚುನಾವಣೆ ವೇಳೆ ಈ ಪ್ರಕರಣವನ್ನು ರಾಜಕೀಯ ದಾಳವಾಗಿ ಬಳಸಲು ಪ್ಲಾನ್ ಹಾಕಲಾಗಿತ್ತಾ? ಇಲ್ಲಿದೆ ವಿವರ...

ಮಧ್ಯಪ್ರದೇಶ ಮಾದರಿಯಲ್ಲಿ ರಾಜ್ಯದ ರಾಜಕಾರಣಿಗಳಿಗೆ, ವಿಶೇಷವಾಗಿ ಬಿಜೆಪಿ ಶಾಸಕರಿಗೆ ಹನಿಟ್ರ್ಯಾಪ್ ಗ್ಯಾಂಗೊಂದು ಖೆಡ್ಡಾ ತೋಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ, ಒಬ್ಬ ಮಹಿಳೆ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

Related Video