ಸಂಡೂರು ಗೆಲುವಿನ ಮೇಲೆ ನಿಂತಿದ್ಯಾ ಸಿದ್ದು ಸಿಂಹಾಸನ ಭವಿಷ್ಯ: ಚನ್ನಪಟ್ಟಣ ಗೆದ್ದರೆ ಡಿಕೆಶಿ ಸಿಎಂ ಆಗ್ತಾರಾ?

ತ್ರಿವಳಿ ಅಖಾಡಗಳ ಉಪಚುನಾವಣೆಯನ್ನು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅದರಲ್ಲೂ ಸಂಡೂರು ಮತ್ತು ಚನ್ನಪಟ್ಟಣವನ್ನು ಗೆಲ್ಲಲೇಬೇಕು ಅನ್ನೋ ಹಠ. ಇದಕ್ಕಾಗಿ ಇಡೀ ಕಾಂಗ್ರೆಸ್ ಸೈನ್ಯವನ್ನೇ ಅಖಾಡಕ್ಕಿಳಿಸಿ ಪ್ರತಿಷ್ಠೆಯ ಯುದ್ಧ ಗೆಲ್ಲೋಕೆ ರೆಡಿಯಾಗಿದ್ದಾರೆ. 

First Published Nov 10, 2024, 2:25 PM IST | Last Updated Nov 10, 2024, 2:25 PM IST

ಬೆಂಗಳೂರು(ನ.10):  ಕೈ ಪಾಳೆಯದಲ್ಲಿ ಭುಗಿಲೆದ್ದು ನಿಂತಿತಾ ಬೂದಿ ಮುಚ್ಚಿದ್ದ ಕೆಂಡ..? ಬೈ ಎಲೆಕ್ಷನ್ ಬ್ಯಾಟಲ್'ನಲ್ಲಿ ಶುರುವಾಯ್ತು ಸಿಂಹಾಸನ ಸಂಘರ್ಷ..! ಇಂದೂ, ಮುಂದೂ ನಾನೇ ಮುಖ್ಯಮಂತ್ರಿ ಎಂದ ಸಿದ್ದರಾಮಯ್ಯ..! ಬೊಂಬೆಯಾಟದಲ್ಲಿ ಗೆದ್ದರೆ ಡಿಕೆ ಸಿಎಂ ಆಗ್ತಾರೆ ಎಂದ ಬಂಡೆ ಭಂಟರು..! ಸಿಎಂಗೆ ಸಂಡೂರು ಸವಾಲ್, ಡಿಸಿಎಂಗೆ ಪಟ್ಟಣ ಪ್ರತಿಷ್ಠೆ.. ಏನದು ಅವಳಿ ಅಖಾಡಗಳಲ್ಲಿ ಅಡಗಿರೋ ಸಿಂಹಾಸನ ಯುದ್ಧದ ಅಸಲಿ ರಹಸ್ಯ..? ಇದು ಅಂತರ್ಯುದ್ಧನಾ..? ಮಿನಿ ಕುರುಕ್ಷೇತ್ರ ಗೆಲ್ಲಲು ಭಲೇ ಜೋಡಿ ಹೆಣೆದ ವಿಜಯಮಂತ್ರನಾ..? ಸಿಎಂ ಸಂಘರ್ಷದ ಹಿಂದಿನ ಅಸಲಿಯತ್ತಿನ ಅನಾವರಣವೇ ಇವತ್ತಿನ ಸುವರ್ಣ ಸ್ಪೆಷಲ್, ಗುದ್ದಾಂ ಗುದ್ದಿ..!

ಸಿಎಂ ಸಿಂಹಾಸನದ ಗುದ್ದಾಂ ಗುದ್ದಿಯ ಹಿಂದೆ ಇಂಟ್ರೆಸ್ಟಿಂಗ್ ಲೆಕ್ಕಾಚಾರವೊಂದು ಅಡಗಿದೆ.. ಅದು ಪಕ್ಕಾ ಲೆಕ್ಕ ಹಾಕಿಯೇ ಸಿದ್ದು-ಡಿಕೆ ಜೋಡಿ ಅವಳಿ ಅಖಾಡಗಳಲ್ಲಿ ಉರುಳಿಸಿರೋ ದಾಳ.. ಅಷ್ಟಕ್ಕೂ ಏನದು ಭಲೇ ಜೋಡಿಯ ದಾಳದ ಹಿಂದಿನ ಅಸಲಿಯತ್ತು..?

ಗುರು-ಶಿಷ್ಯರ ರಣಕಾಳಗಕ್ಕೆ ಸಾಕ್ಷಿಯಾದ ಚನ್ನಪಟ್ಟಣ; ಗೌಡರ ಸೇಡು.. ಸಿದ್ದು ಜಿದ್ದು.. ಧಗಧಗಿಸಿದ ದುಷ್ಮನಿ..!

ಸಂಡೂರು ಸಮರ ಗೆದ್ರೆ ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಂತೆ.. ಚನ್ನಪಟ್ಟಣ ಚದುರಂಗ ಗೆದ್ರೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರಂತೆ.. ಇದು ಸಂಘರ್ಷವೋ, ಸಮರತಂತ್ರವೋ..? ಸಿಎಂ ಸಿಂಹಾಸನದ ಗುದ್ದಾಂ ಗುದ್ದಿಯ ಹಿಂದೆ ಇಂಟ್ರೆಸ್ಟಿಂಗ್ ಲೆಕ್ಕಾಚಾರವೊಂದು ಅಡಗಿದೆ.. ಅದು ಪಕ್ಕಾ ಲೆಕ್ಕ ಹಾಕಿಯೇ ಸಿದ್ದು-ಡಿಕೆ ಜೋಡಿ ಅವಳಿ ಅಖಾಡಗಳಲ್ಲಿ ಉರುಳಿಸಿರೋ ದಾಳ.. ಅಷ್ಟಕ್ಕೂ ಏನದು ಭಲೇ ಜೋಡಿಯ ದಾಳದ ಹಿಂದಿನ ಅಸಲಿಯತ್ತು..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೋಡಿ ಹೆಣೆದಿರೋ ಈ ಸಮರತಂತ್ರ ಬೈ ಎಲೆಕ್ಷನ್'ನಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸುತ್ತಾ..? ಮಿನಿ ಕುರುಕ್ಷೇತ್ರ ಗೆಲ್ಲೋದಕ್ಕೆ ಭಲೇ ಜೋಡಿ ಹೆಣೆದಿರೋ ರಣತಂತ್ರ ಹೇಗಿದೆ ಅನ್ನೋದನ್ನು ತೋರಿಸ್ತೀವಿ.
ತ್ರಿವಳಿ ಅಖಾಡಗಳ ಉಪಚುನಾವಣೆಯನ್ನು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅದರಲ್ಲೂ ಸಂಡೂರು ಮತ್ತು ಚನ್ನಪಟ್ಟಣವನ್ನು ಗೆಲ್ಲಲೇಬೇಕು ಅನ್ನೋ ಹಠ. ಇದಕ್ಕಾಗಿ ಇಡೀ ಕಾಂಗ್ರೆಸ್ ಸೈನ್ಯವನ್ನೇ ಅಖಾಡಕ್ಕಿಳಿಸಿ ಪ್ರತಿಷ್ಠೆಯ ಯುದ್ಧ ಗೆಲ್ಲೋಕೆ ರೆಡಿಯಾಗಿದ್ದಾರೆ. ಅಷ್ಟಕ್ಕೂ ಹೇಗಿದೆ ಗೊತ್ತಾ ಸಿಎಂ-ಡಿಸಿಎಂ ಹೆಣೆದಿರೋ ಯುದ್ಧವ್ಯೂಹ..?

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜಂಟಿಯಾಗಿ ಹೆಣೆದಿರೋ ಸಿಎಂ ಸಮರತಂತ್ರ, ಬೈ ಎಲೆಕ್ಷನ್'ನಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸುತ್ತಾ..? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈ ಪಾಳೆಯಕ್ಕೆ ಸಂಜೀವಿನಿಯಾಗಿದ್ದ ಯುದ್ಧತಂತ್ರ ಈ ಬಾರಿಯೂ ಕಾಂಗ್ರೆಸ್ ಕೈ ಹಿಡಿಯುತ್ತಾ..? ಕಾದು ನೋಡೋಣ.