ಕೈಯಲ್ಲಿ JDS ಬಾವುಟ, ಸಿದ್ದು ಮಾತಿನ ಬಗ್ಗೆ ಡಿಕೆಶಿಗೆ ಉಭಯಸಂಕಟ!

ಸುಮಾರು 2 ತಿಂಗಳ ಬಳಿಕ ಡಿ.ಕೆ.ಶಿವಕುಮಾರ್ ತನ್ನ ತವರು ಜಿಲ್ಲೆಗೆ ಭೇಟಿ ನೀಡಿದರು. ಒಂದರ ಹಿಂದೆ ಮತ್ತೊಂದು ದೇವಸ್ಥಾನಗಳಿಗೆ ಭೇಟಿ, ವಿಶೇಷ ಪೂಜೆ, ಜೊತೆಗೆ ಅಭಿಮಾನಿಗಳಿಗೂ ಡಿಕೆಶಿ ದರ್ಶನ ನೀಡುತ್ತಿದ್ದಾರೆ! ಈ ವೇಳೆ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಡಿಕೆಶಿ ಮಾತನಾಡಿದರು. ಬನ್ನಿ ಅವರೇನು ಹೇಳುತ್ತಿದ್ದಾರೆ ಕೇಳೋಣ....  

First Published Oct 28, 2019, 5:30 PM IST | Last Updated Oct 28, 2019, 5:30 PM IST

ಕನಕಪುರ (ಅ.28): ಸುಮಾರು 2 ತಿಂಗಳ ಬಳಿಕ ಡಿ.ಕೆ.ಶಿವಕುಮಾರ್ ತನ್ನ ತವರು ಜಿಲ್ಲೆಗೆ ಭೇಟಿ ನೀಡಿದರು. ಒಂದರ ಹಿಂದೆ ಮತ್ತೊಂದು ದೇವಸ್ಥಾನಗಳಿಗೆ ಭೇಟಿ, ವಿಶೇಷ ಪೂಜೆ, ಜೊತೆಗೆ ಅಭಿಮಾನಿಗಳಿಗೂ ಡಿಕೆಶಿ ದರ್ಶನ ನೀಡಿದರು.

ಈ ವೇಳೆ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಡಿಕೆಶಿ ಮಾತನಾಡಿದರು. ಕೈಯಲ್ಲಿ JDS ಬಾವುಟ ಹಿಡಿದ ಬಗ್ಗೆಯೂ ಸ್ಪಷ್ಟೀಕರಣ ನೀಡಿದ್ರು, ಸಿದ್ದರಾಮಯ್ಯ ತನ್ನ ಬಗ್ಗೆ ಆಡಿದ್ದಾರೆನ್ನಲಾದ ಮಾತುಗಳ ಬಗ್ಗೆಯೂ ಹೇಳಿದ್ರು.

ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ 48 ದಿನಗಳ ಕಾಲ ಜೈಲುವಾಸ ಅನುಭವಿಸಿ, ಜಾಮೀನು ಮೇಲೆ ಹೊರ ಬಂದಿರುವ ಡಿಕೆಶಿಗೆ ಬೆಂಬಲಿಗರು ಭರ್ಜರಿ ಸ್ವಾಗತ ಕೋರುತ್ತಿದ್ದಾರೆ.