ತಮ್ಮ ಸೋಲಿಸಿದವರನ್ನೇ ಗೆಲ್ಲಿಸಿ ಸೇಡು ತೀರಿಸಿಕೊಂಡರಾ ಅಪೂರ್ವ ಸಹೋದರರು?
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಗೆಲುವಿನ ಹಿಂದೆ ಡಿಕೆ ಸಹೋದರರ ಪಾತ್ರವೇನು? ಈ ಗೆಲುವು ರಾಜ್ಯ ರಾಜಕೀಯದ ಲೆಕ್ಕಾಚಾರವನ್ನು ಹೇಗೆ ಬದಲಾಯಿಸುತ್ತದೆ? ಅಪೂರ್ವ ಸಹೋದರರ ಸೇಡಿನ ಕಥೆ ಇಲ್ಲಿದೆ.
ನಮಸ್ತೆ ವೀಕ್ಷಕರೇ, ರಾಜ್ಯದಲ್ಲಿ ಉಪಸಮರ ಮುಗಿದಾಯ್ತು. ಫಲಿತಾಂಶ ಕೂಡ ಬಂದಾಯ್ತು. ನಿಖಿಲ್ ಅವರ ಸೋಲಿನ ಮೂಲಕ ಒಂದು ಅಧ್ಯಾಯ ಮುಗಿದರೆ, ಅದೇ ಸೋಲಿನ ಮೂಲಕ ಮತ್ತೊಂದು ಅಧ್ಯಾಯ ಆರಂಭವಾಗುತ್ತಿದೆ.. ಡಿಕೆ ಬ್ರದರ್ಸ್ ಯಾವುದಕ್ಕಾಗಿ ಕಾಯ್ತಾ ಇದ್ದಾರೋ ಆ ಕ್ಷಣ ಕಡೆಗೂ ಬಂದಿದೆ.. ಚನ್ನಪಟ್ಟಣದ ಪಟ್ಟ ಯೋಗೇಶ್ವರ್ ಅವರಿಗೆ ದಕ್ಕಿದೆ..ಆದ್ರೆ ಈ ಗೆಲುವಿನ ಪೂರ್ತಿ ಕ್ರೆಡಿಟ್ ಬೇಡ ಬೇಡ ಅಂದ್ರೂ, ಡಿಕೆ ಸಹೋದರರ ಮೂಡಿಗೇರುತ್ತೆ.. ಅದಕ್ಕೆ ಕಾರಣ ಏನು? ಯೋಗೇಶ್ವರ್ ಗೆಲುವು ಡಿಕೆ ಪಾಲಿಗೆ ಅದೃಷ್ಟ ತಂದುಕೊಟ್ಟಿದ್ದು ಹೇಗೆ? ಯಾಕೆ? ಅದೆಲ್ಲದರ ಕತೆ ಇಲ್ಲಿದೆ ನೋಡಿ.ಇಲ್ಲಿಂದ ಮುಂದೆ ರಾಜ್ಯ ರಾಜಕೀಯ ಲೆಕ್ಕಾಚಾರ ಕಂಪ್ಲೀಟ್ ಬದಲಾಗೋ ಸಾಧ್ಯತೆ ಎದ್ದು ಕಾಣುತ್ತಿದೆ. ಅದರಲ್ಲೂ ಮುಖ್ಯವಾಗಿ, ಚೆನ್ನಪಟ್ಟಣದ ರಣಾಂಗಣದ ಕತೆ ಇದ್ಯಾಲ್ಲ, ಅದು ಮತ್ತಷ್ಟು ರೋಚಕತೆ ಹೆಚ್ಚಿಸಿದೆ.. ಅಲ್ಲಿ ಗೆದ್ದದ್ದು ಸಿಪಿ ಯೋಗೇಶ್ವರ್ ಆದ್ರೂ, ಅವ್ರನ್ನ ಗೆಲ್ಲಿಸಿದವರ ಕತೆಯೇ ರೋಚಕವಾಗಿದೆ.. ಗೆಲ್ಲೋದೇ ಅನುಮಾನ ಅನ್ನೋ ಸ್ಥಿತಿ ನಿರ್ಮಾಣವಾಗಿದ್ದ ಕಡೆ, ಅದ್ದೂರಿ ಗೆಲುವು ದಾಖಲಿಸಿದ್ದರ ಹಿಂದೆ, ಒಂದು ದಂತಕತೆಯೇ ಹುಟ್ಟಿಕೊಂಡಿದೆ. ಅದೇ ಅಪೂರ್ವ ಸಹೋದರರ ಸೇಡು... ಆ ಸೇಡಿನ ಕತೆ ಏನು ಅಂತ,ನೀವೇ ನೋಡಿ..