Video: ಹೊಸಕೋಟೆ ರಣಕಣದಲ್ಲಿ ಕೋಟಿ ಕುಳಗಳ ದರ್ಬಾರ್, ವೋಟಿಗಾಗಿ ಚಿನ್ನದ ರಿಂಗ್

ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿ 'ಸಾಂಪ್ರದಾಯಿಕ' ಆಮೀಷವಾದ ಎಲೆಕ್ಷನ್ ನಲ್ಲಿ ಸಾಮಾನ್ಯವಾಗಿ ಕುಕ್ಕರ್, ಸೀರೆ ಮತ್ತು ಒಂದು ವೋಟಿಗೆ ಇಂತಿಷ್ಟು ಹಣ ಕೊಡುವುದನ್ನು ನೋಡಿದ್ದೇವೆ. ಆದ್ರೆ, ಕ್ಷೇತ್ರದಲ್ಲಿ ಚಿನ್ನದ ಉಂಗುರಗಳು ಓಡಾಡುತ್ತಿವೆ. ಅರೇ ಇದೇನಿದು ವೋಟಿಗೆ ಬಂಗಾರದ ಉಂಗುರ ಕೊಡುತ್ತಿದ್ದಾರೆ ಎಂದು ನೀವು ಉಬ್ಬೇರಿಸಬಹುದು.  ಇದು ಅಚ್ಚರಿ ಎನಿಸಿದರೂ ಅಕ್ಷರಶಃ ನಿಜವೇ. ಹಾಗಾದ್ರೆ, ಈ ಮೂವರು ಕೋಟ್ಯಾಧೀಶರಲ್ಲಿ ಯಾರು ಚಿನ್ನದ ಉಂಗುರ ನೀಡುತ್ತಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ......

First Published Nov 25, 2019, 8:11 PM IST | Last Updated Nov 25, 2019, 8:11 PM IST

ಹೊಸಕೋಟೆ, [ನ.25]: ಕೋಟ್ಯಾಧಿಪತಿಗಳ ಕಣ ಎಂದೇ ಕರಿಯಲ್ಪಡುವ ಹೊಸಕೋಟೆ ಉಪಚುನಾವಣೆ ಅಖಾಡ  ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿದೆ. ಕಾಂಗ್ರೆಸ್ ನ ಪದ್ಮಾವತಿ ಸುರೇಶ್, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹಾಗೂ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಈ ಮೂರು ಅಭ್ಯರ್ಥಿಗಳು ಕೋಟ್ಯಾಧಿಪತಿಗಳೇ.

ಹೀಗಿರುವಾಗ ಹೊಸಕೋಟೆಯಲ್ಲಿ ಹಣದ ಹೊಳೆ ಹರಿಯದೇ ಇರುತ್ತಾ..? ಅಭ್ಯರ್ಥಿಗಳೂ ಕೋಟ್ಯಧಿಪತಿಗಳಾಗಿದ್ದು, ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. 

ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿ 'ಸಾಂಪ್ರದಾಯಿಕ' ಆಮೀಷವಾದ ಎಲೆಕ್ಷನ್ ನಲ್ಲಿ ಸಾಮಾನ್ಯವಾಗಿ ಕುಕ್ಕರ್, ಸೀರೆ ಮತ್ತು ಒಂದು ವೋಟಿಗೆ ಇಂತಿಷ್ಟು ಹಣ ಕೊಡುವುದನ್ನು ನೋಡಿದ್ದೇವೆ. ಆದ್ರೆ, ಕ್ಷೇತ್ರದಲ್ಲಿ ಚಿನ್ನದ ಉಂಗುರಗಳು ಓಡಾಡುತ್ತಿವೆ. ಅರೇ ಇದೇನಿದು ವೋಟಿಗೆ ಬಂಗಾರದ ಉಂಗುರ ಕೊಡುತ್ತಿದ್ದಾರೆ ಎಂದು ನೀವು ಉಬ್ಬೇರಿಸಬಹುದು. 

ಇದು ಅಚ್ಚರಿ ಎನಿಸಿದರೂ ಅಕ್ಷರಶಃ ನಿಜವೇ. ಹಾಗಾದ್ರೆ, ಈ ಮೂವರು ಕೋಟ್ಯಾಧೀಶರಲ್ಲಿ ಯಾರು ಚಿನ್ನದ ಉಂಗುರ ನೀಡುತ್ತಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ......