ಮಂಡ್ಯದಲ್ಲಿ ಹಿಂದುತ್ವ ಅಜೆಂಡಾ; ಮೋದಿ ಸ್ವಾಗತಕ್ಕೆ ಟಿಪ್ಪು ವಿರೋಧಿ ಅಸ್ತ್ರ!

ಮಂಡ್ಯದಲ್ಲಿ ಹಿಂದುತ್ವ ಅಜೆಂಡಾ ಮೂಲಕ ಟಿಪ್ಪಿ ವಿರೋಧಿ ಅಸ್ತ್ರವನ್ನು ಬಳಸಿಕೊಂಡು ಮತಬೇಟೆ ಮಾಡಲು ಬಿಜೆಪಿ ಮುಂದಾಗಿದೆ. ಟಿಪ್ಪು ಬೇಕಾ ಅಥವಾ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಬೇಕಾ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಮಂಡ್ಯ (ಮಾ.11): ಮಂಡ್ಯದಲ್ಲಿ ಹಿಂದುತ್ವ ಅಜೆಂಡಾ ಮೂಲಕ ಟಿಪ್ಪಿ ವಿರೋಧಿ ಅಸ್ತ್ರವನ್ನು ಬಳಸಿಕೊಂಡು ಮತಬೇಟೆ ಮಾಡಲು ಬಿಜೆಪಿ ಮುಂದಾಗಿದೆ. ಟಿಪ್ಪು ಬೇಕಾ ಅಥವಾ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಬೇಕಾ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಸಕ್ಕರೆ ನಾಡಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ಈ ವೇಳೆ ಟಿಪ್ಪು ವಿರೋಧಿ ಅಸ್ತ್ರವನ್ನು ಬಳಕೆ ಮಾಡಲಾಗಿದೆ. ಟಿಪ್ಪು ಧರ್ಮ ವಿರೋಧಿ ಆಗಿದ್ದು, ಅವರನ್ನು ಮಳವಳ್ಳಿ ಮೂಲದ ಉರಿಗೌಡ ಮತ್ತು ನಂಜೇಗೌಡ ಅವರೇ ಕೊಲೆ ಮಾಡಿದ್ದಾರೆ. ಟಿಪ್ಪುವಿನ ಧರ್ಮಾಂಧತೆ ಮತ್ತು ಮತಾಂಧತೆ ಬಗ್ಗೆ ಉಲ್ಲೇಖ ಮಾಡುತ್ತಿದ್ದಾರೆ. ಇನ್ನು ಉರಿಗೌಡ ಮತ್ತು ದೊಡ್ಡನಂಜೇಗೌಡರ ಪ್ರತಿಮೆಯನ್ನು ಮಳವಳ್ಳಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಬಿಜೆಪಿ ಹೇಳಿಕೊಂಡಿದೆ. ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಹಿಂದುತ್ವದ ಪ್ಲೇ ಕಾರ್ಡ್‌ ಮೂಲಕ ಮತಗಳನ್ನು ಗಳಿಸಿದ್ದು, ಈಗ ಹಳೆಯ ಮೈಸೂರು ಭಾಗದಲ್ಲಿ ಹಿಂದುತ್ವದ ಪ್ಲೇ ಕಾರ್ಡ್‌ ಬಳಸಲು ಮುಂದಾಗಿದೆ.

Related Video