
ರಾಜ್ಯಸಭಾ ಚುನಾವಣೆ: 4 ಸೀಟು... 224 ವೋಟು... ಸೀಟು-ವೋಟಿನ ರೋಚಕ ಲೆಕ್ಕ!
ರಾಜ್ಯಸಭೆಗೆ ಎರಡು ದಿನಗಳ ಬಾಕಿ ಇರುವಾಗಲೇ ರಾಜ್ಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಮೂರನೇ ಸ್ಥಾನಕ್ಕಾಗಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪೈಪೋಟಿ ನಡೆಸಿವೆ. ಅದರಲ್ಲೂ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಫೈಟ್ ಮುಂದುವರೆದಿದ್ದು, ಸಿದ್ದರಾಮಯ್ಯ ಮತ್ತು ಎಚ್‌ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಜೋರಾಗಿದೆ.
ಬೆಂಗಳೂರು, (ಜೂ.8): ರಾಜ್ಯಸಭೆಗೆ ಎರಡು ದಿನಗಳ ಬಾಕಿ ಇರುವಾಗಲೇ ರಾಜ್ಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಮೂರನೇ ಸ್ಥಾನಕ್ಕಾಗಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪೈಪೋಟಿ ನಡೆಸಿವೆ. ಅದರಲ್ಲೂ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಫೈಟ್ ಮುಂದುವರೆದಿದ್ದು, ಸಿದ್ದರಾಮಯ್ಯ ಮತ್ತು ಎಚ್‌ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಜೋರಾಗಿದೆ.
'ನಮ್ ಮತ ನೀವು ತಗೊಳ್ಳಿ, ನಿಮ್ ಮತ ನಮಗೆ ಕೊಡಿ' ಸಿಎಂ ಇಬ್ರಾಹಿಂ ಸಂಧಾನಸೂತ್ರ!
ಬಿಜೆಪಿಗೆ ಮೂರನೇ ಸ್ಥಾನ ತಪ್ಪಿಸುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಮೈತ್ರಿ ಮಾಡಿಕೊಳ್ಳುವತ್ತ ಹೆಜ್ಜೆ ಇಡುತ್ತಿವೆ. ಅದರೆ, ಎರಡೂ ಪಕ್ಷಗಳು ಯಾರನ್ನು ಒಮ್ಮತ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇನ್ನೂ ಗೊಂದಲ್ಲಿದಲ್ಲಿಯೇ ಇವೆ.