Asianet Suvarna News Asianet Suvarna News

ಮಂತ್ರಾಲಯಕ್ಕೆ ಹೆಚ್.ಡಿ.ಕೆ ದಂಪತಿ ಭೇಟಿ: 'ಟಿಕೆಟ್‌' ಕಂಪನ ನಡುವೆ ಟೆಂಪಲ್‌ ರನ್‌

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಈ ನಡುವೆ ಹಾಸನದಲ್ಲಿ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಭಿನ್ನಮತ ಶುರುವಾಗಿದೆ.

ಹಾಸನ ಟಿಕೆಟ್‌ ವಿಚಾರವಾಗಿ ದೇವೇಗೌಡರ ಕುಟುಂಬದಲ್ಲಿ ಫೈಟ್ ಶುರುವಾಗಿದ್ದು, ಟಿಕೆಟ್‌ ಟೆನ್ಷನ್‌ ನಡುವೆ ಕುಮಾರಸ್ವಾಮಿ ದಂಪತಿ ಟೆಂಪಲ್‌ ರನ್‌ ಶುರು ಮಾಡಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ ಜತೆ ಹೆಚ್.ಡಿ.ಕೆ ರಾಯರ ಮಠಕ್ಕೆ ಭೇಟಿ ನೀಡಿದ್ದಾರೆ. ಮಂತ್ರಾಲಯದ ಮಂಚಾಲಮ್ಮ ತಾಯಿ ದರ್ಶನ ಪಡೆದು, ರಾಯರ ಮೂಲ ಬೃಂದಾವನ ದರ್ಶನ ಪಡೆದಿದ್ದಾರೆ. ಹಾಗೂ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಕೂಡ ಭೇಟಿ ಮಾಡಿ, ಪಂಚರತ್ನ ಯಾತ್ರೆ ಬಗ್ಗೆ ಚರ್ಚೆ ಮಾಡಿದ್ದಾರೆ.

Video Top Stories