Karnataka Election 2023: ಹಾಸನ ಜೆಡಿಎಸ್ ಟಿಕೆಟ್ ಫೈಟ್: ಭವಾನಿ ರೇವಣ್ಣ ಪಟ್ಟು, ಹೆಚ್.ಡಿ.ಕೆಗೆ ಇಕ್ಕಟ್ಟು

ಹಾಸನ ಟಿಕೆಟ್‌ನಿಂದ ದೇವೇಗೌಡರ ಕುಟುಂಬದಲ್ಲಿ ಕಂಪನ ಉಂಟಾಗಿದ್ದು, ಟಿಕೆಟ್‌ಗೆ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದಾರೆ. 
 

Share this Video
  • FB
  • Linkdin
  • Whatsapp

ಹಾಸನದಲ್ಲಿ ಟಿಕೆಟ್ ವಿಚಾರದಲ್ಲಿ ದಳಪತಿ ಕುಟುಂಬದಲ್ಲಿ ಭಿನ್ನಮತ ಶುರುವಾಗಿದ್ದು, ಟಿಕೆಟ್‌'ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದಾರೆ. ಇದು ಕುಮಾರಸ್ವಾಮಿಗೆ ಇಕ್ಕಟ್ಟು ಉಂಟು ಮಾಡಿದೆ. ಜೆಡಿಎಸ್‌'ನಲ್ಲಿ ಟಿಕೆಟ್‌ ಟೆನ್ಷನ್‌ ಮುಗಿದಿಲ್ಲ. ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆಗೆ ಕುಮಾರಸ್ವಾಮಿ ನಕಾರ ಎಂದಿದ್ದು, ಇನ್ನು ಟಿಕೆಟ್‌ಗಾಗಿ ದೇವೇಗೌಡರ ಬಳಿ ಭವಾನಿ ರೇವಣ್ಣ ಮನವಿ ಮಾಡಿದ್ದಾರೆ. ಹಾಸನ ಟಿಕೆಟ್‌ ಬಗ್ಗೆ ಭವಾನಿ ಗೌಡರ ಬಳಿ ಚರ್ಚಿಸಿದ್ದಾರೆ. ಹೆಚ್‌ಡಿಕೆ ಹಾಸನದಲ್ಲಿ ಚುನಾವಣೆಗಾಗಿ ಎಲ್ಲ ಸಿದ್ಧತೆ ನಡೆಸುತ್ತಿದ್ದು, ಈ ಸಮಯದಲ್ಲಿ ಸ್ವರೂಪ್‌ಗೆ ಟಿಕೆಟ್‌ ತಪ್ಪಿದ್ರೆ ತಪ್ಪು ಸಂದೇಶ ರವಾನೆ ಆಗುವ ಸಾಧ್ಯತೆ ಇದೆ. ಕುಟುಂಬ ರಾಜಕೀಯಕ್ಕೆ ಮಣೆ ಎಂಬ ಸಂದೇಶದಿಂದ ಪಕ್ಷಕ್ಕೆ ಹಾನಿ ಸಾಧ್ಯತೆ ಇದೆ.

Pratham Paryatane:ನಿಖಿಲ್‌ ಕುಮಾರಸ್ವಾಮಿ ಗೆಲ್ಲುತ್ತಾರೆ: ಇದು ರಾಮನಗರ ಜನರ ಮನದಾಳದ ಮಾತು

Related Video