5 ವರ್ಷ ಸರ್ಕಾರ ಕೊಟ್ರೆ ನಿಮ್ಮ ಮಗನಾಗಿ ಕೆಲಸ ಮಾಡ್ತೀನಿ: ಎಚ್‌ಡಿ ಕುಮಾರಸ್ವಾಮಿ
ಮುಖ್ಯಮಂತ್ರಿಯಾಗುವ ಅಭಿಲಾಷೆ ವ್ಯಕ್ತಪಡಿಸಿದ, ಇದಕ್ಕಾಗಿ ಒಕ್ಕಲಿಗ ಸಮುದಾಯದ ಬೆಂಬಲ ಕೋರಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ (Shivakumar) ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಟಾಂಗ್ ನೀಡಿದ್ದಾರೆ.
ಬೆಂಗಳೂರು (ಜು. 20): ಮುಖ್ಯಮಂತ್ರಿಯಾಗುವ ಅಭಿಲಾಷೆ ವ್ಯಕ್ತಪಡಿಸಿದ, ಇದಕ್ಕಾಗಿ ಒಕ್ಕಲಿಗ ಸಮುದಾಯದ ಬೆಂಬಲ ಕೋರಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ (Shivakumar) ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಟಾಂಗ್ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರಿಗೂ ಮುಖ್ಯಮಂತ್ರಿ ಆಗುವ ಆಸೆ ಇದೆ. ಆದರೆ ಇಬ್ಬರ ಆಸೆಯೂ ಈಡೇರುವುದಿಲ್ಲ ಎಂದು ಕಾಲೆಳೆದಿದ್ದಾರೆ.
Exclusive Interview: ಸಿದ್ದರಾಮೋತ್ಸವ ಶಕ್ತಿ ಪ್ರದರ್ಶನ ಅಲ್ಲ, ಅನಗತ್ಯ ವಿವಾದ ಅಷ್ಟೇ:ಸಿದ್ದರಾಮಯ್ಯ
' ಬಹಳ ಜನ ಸಿಎಂ ಆಗಬೇಕು ಅಂತ ಆಸೆಪಟ್ಟಿದ್ದಾರೆ. ಆದರೆ ಭಗವಂತನ ಇಚ್ಛೆಯೇ ಬೇರೆ ಇದೆ. ನನಗೆ ತಾಯಿ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದೆ. ಜನರ ಆಶೀರ್ವಾದದಿಂದ ಕೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತೆ. 5 ವರ್ಷ ಸರ್ಕಾರ ಕೊಟ್ರೆ ನಿಮ್ಮ ಮಗನಾಗಿ ಕೆಲಸ ಮಾಡ್ತೀನಿ' ಎಂದು ರಾಮನಗರದಲ್ಲಿ ಎಚ್‌ಡಿಕೆ ಹೇಳಿದ್ದಾರೆ.